ಬೆಂಗಳೂರು: ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಜೈಲಿನ ಊಟದಿಂದಾಗಿ ದೇಹದ ತೂಕ ಇಳಿಕೆಯಾಗುತ್ತಿದೆ. ಮನೆಯ ಊಟಕ್ಕೆ ಅವಕಾಶ ಮಾಡಿಕೊಡುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಬೆನ್ನಲ್ಲೇ, ಜೈಲು ಮಹಾನಿರ್ದೇಶಕರಿಗೆ ಪತ್ರ ಬರೆದು, ಮನೆಯೂಟಕ್ಕೆ ಅವಕಾಶ ಮಾಡಿಕೊಡುವಂತೆ ನಟ ದರ್ಶನ್ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವಂತ ನಟ ದರ್ಶನ್ ಅವರು ಮನೆಯೂಟ, ಹಾಸಿಗಾಗಿ ಕೋರ್ಟ್ ಮೊರೆ ಹೋಗಿದ್ದರು. ಆದ್ರೇ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ತಾಂತ್ರಿಕ ಕಾರಣದಿಂದ ವಾಪಾಸ್ ಪಡೆಯಲಾಗಿತ್ತು. ಆ ನಂತ್ರ ಹೈಕೋರ್ಟ್ ಗೆ ಮೇಲ್ಮನವಿಯನ್ನು ನಟ ದರ್ಶನ್ ಪರ ವಕೀಲರು ಮನೆಯೂಟಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ಬೆನ್ನಲ್ಲೇ ನನಗೆ ಮನೆಯೂಟಕ್ಕೆ ಅವಕಾಶ ನೀಡುವಂತೆ ನಟ ದರ್ಶನ್ ಅವರು ಜೈಲು ಮಹಾನಿರ್ದೇಶಕರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ನಟ ದರ್ಶನ್ ಜೈಲು ಅಧಿಕಾರಿಗಳಿಗೆ ಬರೆದಿರುವಂತ ಪತ್ರದಲ್ಲಿ ಜೈಲೂಟದಲ್ಲಿ ನನಗೆ ಬೇಕಾದಂತ ಆಹಾರದ ಕೊರತೆಯಿದೆ. ನಾನು ಜೈಲು ಊಟ ಸೇವಿಸಿದ ನಂತ್ರ ಕಳೆದ 1 ತಿಂಗಳಿನಿಂದ ನನ್ನ ದೇಹದ ತೂಕ ಸುಮಾರು 10 ಕೆಜಿ ಇಳಿಕೆಯಾಗಿದೆ. ನನಗೆ ಮೂಳೆ ಸಂಬಂಧಿತ ಶಸ್ತ್ರ ಚಿಕಿತ್ಸೆ ಆಗಿದೆ. ನನ್ನ ದೇಹದ ಮೇಲೆ ಜೈಲಿನ ಊಟವು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನನ್ನ ದೇಹಕ್ಕೆ ಪ್ರೋಟಿನ್ ಯುಕ್ತ ಡಯೆಟ್ ಅಂಶವಿರುವಂತ ಆಹಾರ ಅಗತ್ಯವಿದೆ. ಹೀಗಾಗಿ ಮನೆಯ ಊಟಕ್ಕೆ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ನಟ ದರ್ಶನ್ ಸಲ್ಲಿಸಿರುವಂತ ಮನೆಯೂಟದ ಮೇಲ್ಮನವಿ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಬೇಕಿದೆ. ಇದರ ನಡುವೆ ಜೈಲು ಅಧಿಕಾರಿಗಳಿಗೆ ಸಲ್ಲಿಸಿರುವಂತ ಮನವಿ ಪತ್ರಕ್ಕೆ, ಗ್ರೀನ್ ಸಿಗ್ನಲ್ ನೀಡಿ, ಮನೆ ಊಟಕ್ಕೆ ಅವಕಾಶ ಸಿಗೋತ್ತಾ ಅಥವಾ ಇಲ್ಲವೋ ಅನ್ನೋದನ್ನು ಕಾದು ನೋಡಬೇಕಿದೆ.
ಬೆಂಗಳೂರು ಜನತೆ ಗಮನಕ್ಕೆ: ನಾಳೆ ರಾತ್ರಿ 9 ಗಂಟೆಯವರೆಗೆ ‘BBMP ಕಂದಾಯ ಕಚೇರಿ’ಗಳು ಓಪನ್
ಶಿವಮೊಗ್ಗ: ನಾಳೆ ಸಾಗರದ ‘ಕಾರ್ಯನಿರತ ಪತ್ರಕರ್ತರ ಸಂಘ’ದಿಂದ ‘ಪತ್ರಿಕಾ ದಿನಾಚರಣೆ’