ನವದೆಹಲಿ: ಮುಂಬೈಗೆ ತೆರಳುತ್ತಿದ್ದ ರೈಲಿನ ಸುಮಾರು 18 ಬೋಗಿಗಳು ಜಾರ್ಖಂಡ್ನಲ್ಲಿ ಇಂದು ಮುಂಜಾನೆ ಹಳಿ ತಪ್ಪಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಾಯಗೊಂಡಿದ್ದಾರೆ.
ಹೌರಾ-ಸಿಎಸ್ಎಂಟಿ ಎಕ್ಸ್ಪ್ರೆಸ್ ಮುಂಜಾನೆ 3.45 ರ ಸುಮಾರಿಗೆ ಜೆಮ್ಷೆಡ್ಪುರದಿಂದ 80 ಕಿ.ಮೀ ದೂರದಲ್ಲಿರುವ ಬಡಾಬಂಬೂ ಬಳಿ ಹಳಿ ತಪ್ಪಿದೆ. ಹಳಿ ತಪ್ಪಿದ ಕೂಡಲೇ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿರಿಯ ರೈಲ್ವೆ ಅಧಿಕಾರಿ ಓಂ ಪ್ರಕಾಶ್ ಚರಣ್ ಮಾತನಾಡಿ, ಗೂಡ್ಸ್ ರೈಲು ಕೂಡ ಹತ್ತಿರದಲ್ಲೇ ಹಳಿ ತಪ್ಪಿದೆ, ಆದರೆ ಎರಡು ಅಪಘಾತಗಳು ಏಕಕಾಲದಲ್ಲಿ ಸಂಭವಿಸಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹಳಿ ತಪ್ಪಿದ 18 ಬೋಗಿಗಳಲ್ಲಿ 16 ಪ್ರಯಾಣಿಕರ ಬೋಗಿಗಳು, ಒಂದು ಪವರ್ ಕಾರ್ ಮತ್ತು ಒಂದು ಪ್ಯಾಂಟ್ರಿ ಕಾರು ಎಂದು ಅವರು ಹೇಳಿದರು. ಗಾಯಗೊಂಡವರಿಗೆ ರೈಲ್ವೆಯ ವೈದ್ಯಕೀಯ ತಂಡವು ಪ್ರಥಮ ಚಿಕಿತ್ಸೆ ನೀಡಿದ್ದು, ಅವರನ್ನು ಈಗ ಉತ್ತಮ ಚಿಕಿತ್ಸೆಗಾಗಿ ಚಕ್ರಧರಪುರಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರೈಲು ಹಳಿ ತಪ್ಪಲು ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುತ್ತಿದೆ ಎಂದು ಅವರು ಹೇಳಿದರು.
ಪೀಡಿತ ಪ್ರಯಾಣಿಕರಿಗಾಗಿ ಬಸ್ಸುಗಳು ಮತ್ತು ಹೆಚ್ಚುವರಿ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ ಮತ್ತು ಭಾರತೀಯ ರೈಲ್ವೆ ಸಹಾಯವಾಣಿ ಸಂಖ್ಯೆಗಳನ್ನು ಸಹ ಬಿಡುಗಡೆ ಮಾಡಿದೆ.
Two killed as several coaches of Howrah-CSMT Express train derail near Jharkhand's Chakradharpur
Read @ANI Story | https://t.co/nAZpbqOY5D#TrainAccident #HowrahCSMTExpress #trainderailment pic.twitter.com/hKZflDZzYh
— ANI Digital (@ani_digital) July 30, 2024