Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವನ್ಯ ಜೀವಿ ಸಿಬ್ಬಂದಿ’ಗೆ ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ ‘ಕಠಿಣ ಕೆಲಸದ ಭತ್ಯೆ’ ಮಂಜೂರು
KARNATAKA

‘ವನ್ಯ ಜೀವಿ ಸಿಬ್ಬಂದಿ’ಗೆ ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ ‘ಕಠಿಣ ಕೆಲಸದ ಭತ್ಯೆ’ ಮಂಜೂರು

By kannadanewsnow0929/07/2024 4:48 PM

ಬೆಂಗಳೂರು : ವನ್ಯಜೀವಿ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಂಚೂಣಿ ಸಿಬ್ಬಂದಿಗಳಿಗೆ ಕಠಿಣ ಕೆಲಸದ ಭತ್ಯೆ (ಹಾರ್ಡ್ ಶಿಪ್ ಅಲೋಯನ್ಸ್)ಯನ್ನು ಮಂಜೂರು ಮಾಡಿದ್ದು, ಈ ಸಿಬ್ಬಂದಿಯ ಬಹು ದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳಿಗೆ ತಲಾ 3500, ಅರಣ್ಯ ರಕ್ಷಕರಿಗೆ 2700 ಹಾಗೂ ಡಿ ದರ್ಜೆ ನೌಕರರಿಗೆ 2000 ರೂ.ಗಳನ್ನು ಮಾಸಿಕ ನೀಡಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.

ರಾಜ್ಯದ ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು, ಚಾಮರಾಜನಗರ, ರಾಮನಗರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಬಂಡೀಪುರ ವ್ಯಾಪ್ತಿಯಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಇದರ ನಿಗ್ರಹಕ್ಕಾಗಿ ಆನೆ ಕಾರ್ಯಪಡೆ ರಚಿಸಲಾಗಿದ್ದು, ಇದರಲ್ಲಿ ಕಾರ್ಯ ನಿರ್ವಹಿಸುವ ಹೊರಗುತ್ತಿಗೆ ಸಿಬ್ಬಂದಿಯೂ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾಸಿಕ ಕರ್ತವ್ಯ ನಿರ್ವಹಿಸಿದ 6 ದಿನಗಳಿಗೆ 500 ರೂ. ಆಧಾರದಲ್ಲಿ ತಿಂಗಳಿಗೆ ಗರಿಷ್ಠ 2000 ರೂ. (ಷರತ್ತಿಗೆ ಒಳಪಟ್ಟು) ನೀಡಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

"ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಗಳ ಮುಂಚೂಣಿ ಸಿಬ್ಬಂದಿಗೆ ಹುದ್ದೆಯನುಸಾರ ಮಾಸಿಕ ₹2,000 ದಿಂದ ₹3,500ರ ವರೆಗೆ 'ಕಠಿಣ ಕೆಲಸದ ಭತ್ಯೆ'ಯನ್ನು ಮಂಜೂರು ಮಾಡಲಾಗಿದೆ" ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಆರ್‌ಎಫ್‌ಒ, ಎಆರ್‌ಎಫ್‌ಒಗೆ ₹3,500, ಅರಣ್ಯ ರಕ್ಷಕರಿಗೆ ₹2,700 ಮತ್ತು ಡಿ ದರ್ಜೆ ನೌಕರರಿಗೆ ₹2,000 ಭತ್ಯೆ… pic.twitter.com/5eZfEqhpP5

— DIPR Karnataka (@KarnatakaVarthe) July 29, 2024

ನಂಜನಗೂಡು, ಎಚ್.ಡಿ.ಕೋಟೆ, ಸರಗೂರು, ಟಿ. ನರಸೀಪುರ, ಮಂಡ್ಯ, ಪಾಂಡವಪುರ, ನಾಗಮಂಗಲ ಹಾಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿರತೆ ಕಾರ್ಯಪಡೆ, ವನ್ಯ ಜೀವಿಗಳನ್ನು ಹಿಮ್ಮೆಟ್ಟಿಸುವ ಕ್ಷಿಪ್ರ ಸ್ಪಂದನಾ ಪಡೆ ಸಿಬ್ಬಂದಿ ಮತ್ತು ಅರಣ್ಯದೊಳಗಿರುವ ಕಳ್ಳಬೇಟೆ ಶಿಬಿರಗಳಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಹೊರಗುತ್ತಿಗೆ ನೌಕರರಿಗೂ ಇದು ಅನ್ವಯಿಸುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ತಾವು ನಾಗರಹೊಳೆ ಮತ್ತು ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿ ಮತ್ತು ಹೊರಗುತ್ತಿಗೆ ನೌಕರರು ಚಳಿ, ಮಳೆ, ಗಾಳಿ ಎನ್ನದೆ, ವನ್ಯಜೀವಿಗಳ ದಾಳಿಯ ಅಪಾಯದ ನಡುವೆಯೂ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಗಮನಿಸಿ, ಈ ವಿಶೇಷ ಭತ್ಯೆ ನೀಡಲು ತೀರ್ಮಾನಿಸಿದ್ದಾಗಿ ತಿಳಿಸಿದ್ದಾರೆ.

 

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ವಿವಿಧ ಯೋಜನೆಯಡಿ ಆನ್‌ಲೈನ್ ಅರ್ಜಿ ಆಹ್ವಾನ

BREAKING : ಜಮ್ಮು-ಕಾಶ್ಮೀರದಲ್ಲಿ ಭೀಕರ ಸ್ಫೋಟ : ನಾಲ್ವರು ದುರ್ಮರಣ |Blast at J&K’s Baramulla

Share. Facebook Twitter LinkedIn WhatsApp Email

Related Posts

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM1 Min Read

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM3 Mins Read

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM3 Mins Read
Recent News

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

08/06/2025 9:16 PM

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM
State News
KARNATAKA

ಚಿನ್ನಸ್ವಾಮಿ ಕ್ರೀಢಾಂಗಣದ ಬಳಿ ಕಾಲ್ತುಳಿತ ದುರಂತ ತುಂಬಾ ನೋವು ತಂದಿದೆ: ಸಿಎಂ ಸಿದ್ಧರಾಮಯ್ಯ ಭಾವುಕ ನುಡಿ

By kannadanewsnow0908/06/2025 9:16 PM KARNATAKA 1 Min Read

ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗದಂತ ಕಾಲ್ತುಳಿತ ದುರಂತವು ತುಂಬಾ ನೋವು ತಂದಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ನುಡಿಯಾಡಿದ್ದಾರೆ.…

BIG NEWS: ವಿಧಾನಸೌಧದ ಆವರಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

08/06/2025 8:50 PM

ಮನೆಯಲ್ಲಿ ಎಷ್ಟೇ ಕಷ್ಟಗಳಿದ್ದರೂ ಪರಿಹಾರವಾಗಿ ಧನಪ್ರಾಪ್ತಿಯಾಗಲು ಸಾತ್ವಿಕ ಲೋಳೆಸರ ಗಿಡದ ತಂತ್ರ !

08/06/2025 8:39 PM

ರಾಜ್ಯದಲ್ಲಿಂದು 61 ಜನರಿಗೆ ಕೊರೋನಾ ದೃಢ: ಸೋಂಕಿತರ ಸಂಖ್ಯೆ 423ಕ್ಕೆ ಏರಿಕೆ

08/06/2025 7:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.