ಮಂಡ್ಯ: ಬಹುತೇಕ ಶುಭ ಕಾರ್ಯಗಳನ್ನು ಪ್ರಾರಂಭಿಸೋದು, ಅಣಿಯಾಗೋದು ಆಷಾಡ ಮುಗಿದ ಮೇಲೆಯೇ ಆಗಿದೆ. ಆದರೇ ಸಿಎಂ ಸಿದ್ಧರಾಮಯ್ಯ ಆಷಾಡದಲ್ಲೂ ಕೆ ಆರ್ ಎಸ್ ಡ್ಯಾಂಗೆ ಬಾಗಿನ ಅರ್ಪಿಸುವ ಮೂಲಕ ಸಂಪ್ರದಾಯವನ್ನು ಮುರಿದಿದ್ದಾರೆ. ಇದಷ್ಟೇ ಅಲ್ಲದೇ ಇದೇ ಮೊದಲ ಬಾರಿಗೆ ಬಾಗಿನ ಅರ್ಪಿಸಿದ ಬಳಿಕ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಬರ್ಜರಿ ಬಾಡೂಟದ ವ್ಯವಸ್ಥೆ ಮಾಡಿ, ಸಂಪ್ರದಾಯಕ್ಕೂ ತಿಲಾಂಜಲಿ ಇಟ್ಟಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಾಗಿನ ಅರ್ಪಿಸಿದರು. ಆದರೇ ಸಂಪ್ರದಾಯ ಮುರಿಯುವಂತೆ ಆಷಾಡದಲ್ಲಿ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರು ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಕ ಅತ್ತ ತೆರಳುತ್ತಲೇ ಕಾವೇರಿ ನಿರಾವರಿ ನಿಗಮದ ಅಧಿಕಾರಿಗಳ ಯಡವಟ್ಟೋ ಅಥವಾ ಸಂಪ್ರದಾಯ ಮುರಿಯುವಂತೆಯೋ, ಅಧಿಕಾರಿಗಳಿಗೆ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.
ಕೆ ಆರ್ ಎಸ್ ನ ಖಾಸಗೀ ಹೋಟೆಲ್ ನಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಿಎಂ, ಡಿಸಿಎಂ, ಸಚಿವರು ಬಾಗಿನ ಅರ್ಪಿಸಿ ತೆರಳಿದ ಬಳಿಕ ಬಾಡೂಟವನ್ನು ಉಣಬಡಿಸಲಾಗಿದೆ.
ಅಂದಹಾಗೇ ಕೆ ಆರ್ ಎಸ್ ಅಣೆಕಟ್ಟೆ ಭರ್ತಿಯಾದ ನಂತ್ರ ಕಾವೇರಿಗೆ ಬಾಗಿನ ಅರ್ಪಿಸಿದ ಬಳಿಯ ಈವರೆಗೆ ಯಾವತ್ತೂ ಬಾಡೂಟದ ವ್ಯವಸ್ಥೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಎನ್ನುವಂತೆ ನಿಗಮದ ಅಧಿಕಾರಿಗಳು ಬಾಡೂಟವನ್ನು ಅಧಿಕಾರಿಗಳು, ಸಿಬ್ಬಂದಿಗಳಿಗೆ ಹಾಕಿ, ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
2025ರ ಪುರುಷರ ‘ಏಷ್ಯಾ ಕಪ್’ ಆವೃತ್ತಿಗೆ ಭಾರತ ಆತಿಥ್ಯ | Men’s Asia Cup in 2025