ಮಂಡ್ಯ: ಹಣ, ಅಧಿಕಾರ, ಹುದ್ದೆ ಬಂದು ಹೋಗ್ತಾವೆ. ಆದರೇ ಗಳಿಸೋ ಸ್ನೇಹ, ಉಳಿಸಿಕೊಳ್ಳುವ ಗೌರವ, ತೋರುವ ನಡೆ ಮಾತ್ರ ನೀವು ಎಷ್ಟು ಸರಳ, ಸಜ್ಜನ ಎಂಬುದನ್ನು ನಿರ್ಧರಿಸುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಿಎಂ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರೂ, ಅವರು ಎಷ್ಟು ಸರಳ ಎನ್ನುವುದಕ್ಕೆ ಈ ಘಟನೆಯೊಂದು ಸಾಕ್ಷಿಯಾಗಿದೆ. ಅದೇನು.? ಸಿಎಂ ಸಿದ್ಧರಾಮಯ್ಯ ( CM Siddaramaiah ) ಆ ಸರಳತೆಯ ನಡೆಯೇನು ಅಂತ ಮುಂದೆ ಓದಿ.
ಅನೇಕರು ಅಧಿಕಾರ, ಹುದ್ದೆಗೇರಿದ್ದೇ ತಡ ತಮ್ಮ ಲೈಫ್ ಸ್ಟೈಲ್ ( Life Style ) ಅನ್ನೇ ಬದಲಿಸಿ ಬಿಡುತ್ತಾರೆ. ಜನಸಾಮಾನ್ಯರಿಗೆ ಸಿಗೋದು ಡೌಟೇ ಆಗಿ ಬಿಡುತ್ತೆ. ಇನ್ನೂ ಊಟೋಪಚಾರವಂತೂ ತ್ರೀ ಸ್ಟಾರ್, ಫೈವ್ ಸ್ಟಾರ್ ಹೋಟೆಲ್ ನಲ್ಲೇ ( Five Star Hotel ) ನಡೆಯಬೇಕು ಬೇಕು ಅನ್ನೋರು ಇದ್ದಾರೆ. ಇಂತವರ ನಡುವೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತ್ರ ಇಂದು ದಾರಿಯ ಮಧ್ಯದಲ್ಲೇ ಸಿಕ್ಕ ಸಣ್ಣ ಹೋಟೆಲ್ ಒಂದರಲ್ಲೇ ಬೆಳಗಿನ ಉಪಹಾರ ಸೇರಿವಿಸಿ ಸರಳತೆ ಮರೆದಿದ್ದಾರೆ.
ಹೌದು ಮುಖ್ಯಮಂತ್ರಿ ಸಿದ್ದರಾಮಯ್ಯ ( Chief Minister Siddaramaiah ) ಅವರು ಮೈಸೂರಿನ ತಮ್ಮ ನಿವಾಸದಿಂದ ಕೆಆರ್ ಎಸ್ ಡ್ಯಾಂಗೆ ( KRS Dam ) ಬಾಗಿನ ಅರ್ಪಿಸಲು ತೆರಳುವ ಮುನ್ನ ಮೈಲಾರಿ ಹೋಟೆಲಿನಲ್ಲಿ ಬೆಳಗಿನ ಉಪಹಾರ ಸವಿದರು.
ಬಾಳೆಲೆಯಲ್ಲಿ ಹಾಕಿಕೊಟ್ಟಂತ ಇಡ್ಲಿ, ಸಾಂಬಾರ್, ಚಟ್ನಿಯನ್ನು ಸೇವಿಸಿದಂತ ಅವರು, ಸರಳತೆಯನ್ನು ಮರೆದು ಇತರರರಿಗೆ ಮಾದರಿಯಾಗಿದ್ದಾರೆ. ಈ ರಾಜ್ಯದ ಮುಖ್ಯಮಂತ್ರಿಯಾದಂತ ಅವರು, ಜನಸಾಮಾನ್ಯರಂತೆ ಇಂದು ಮೈಲಾರಿ ಹೋಟೆಲ್ ನಲ್ಲಿ ಉಪಹಾರ ಸೇವಿಸಿ, ಮಾದರಿಯ ನಡೆಯನ್ನು ತೋರಿದ್ದಾರೆ. ಈ ಮೂಲಕ ಸಿಎಂ ಸಿದ್ಧರಾಮಯ್ಯ ಇಷ್ಟೊಂದು ಸರಳತೆಯೇ ಅನ್ನೋ ಹಾಗೆ ಹುಬ್ಬೇರುವಂತೆ ಮಾಡಿದ್ದಾರೆ.
BIG NEWS: ನಾನು ಎಷ್ಟು ದಿನ ಸಚಿವನಾಗಿರುತ್ತೇನೋ ಗೊತ್ತಿಲ್ಲ: ‘ಸಂಪುಟ ಸರ್ಜರಿ’ಯ ಸುಳಿವು ನೀಡಿದ ‘ಜಮೀರ್ ಅಹ್ಮದ್’