ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ ಗೆ ಪತ್ನಿ ವಿಜಯಲಕ್ಷ್ಮೀ ಅವರು ಕೊಲ್ಲೂರು ಮೂಕಾಂಬಿಕ ದೇವಿಯ ಪ್ರಸಾದ ಕೊಟ್ಟಿದ್ದಾರೆ.
ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದ ವಿಜಯಲಕ್ಷ್ಮೀ ಅವರು ಇಂದು ದರ್ಶನ್ ಗೆ ಕೊಲ್ಲೂರು ಮೂಕಾಂಬಿಕ ದೇವಿಯ ಪ್ರಸಾದವನ್ನು ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಸಂಕಷ್ಟದಿಂದ ಪಾರುಮಾಡುವಂತೆ ವಿಜಯಲಕ್ಷ್ಮೀ ಅವರು ಚಂಡಿಕಾ ಹೋಮ ನೆರವೇರಿಸಿದ್ದರು.
ಇದೀಗ ಪತಿ ದರ್ಶನ್ ಗೆ ಪ್ರಸಾದ ಕೊಡಲು ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮೀ ಅವರು ಆಗಮಿಸಿದ್ದರು. ಈ ವೇಳೆ ದರ್ಶನ್ ಸಹೋದರ ದಿನಕರ್ ತೂಗುದೀಪ ಸಹ ಇದ್ದರು.