ಮಂಡ್ಯ: ಜಿಲ್ಲೆಯ ರೈತ ಜೀವನಾಡಿಯಾಗಿರುವಂತ ಕೃಷ್ಣರಾಜ ಸಾಗರ ಜಲಾಶಯ( KRS Dam) ಹಾಗೂ ಕಬಿನಿ ಜಲಾಶಯವು ಸಂಪೂರ್ಣ ಭರ್ತಿಯಾಗಿದೆ. ಈ ಹಿನ್ನಲೆಯಲ್ಲಿ ಜುಲೈ.29ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಡ್ಯಾಂಗೆ ತೆರಳಿ ಭಾಗೀನವನ್ನು ಅರ್ಪಿಸಲಿದ್ದಾರೆ.
ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಮೂಲಗಳು ತುಂಬಿ ಹರಿಯುತ್ತಿವೆ. ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳು ಭರ್ತಿಯಾಗಿರುವ ಸಮೃದ್ಧಿಯ ಸಂಕೇತದ ಶುಭ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಾವೇರಿ ಮಾತೆಗೆ ಪೂಜೆ ಹಾಗೂ ಬಾಗಿನ ಅರ್ಪಿಸಲಿದ್ದಾರೆ.
ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮವು ಜುಲೈ 29, ಸೋಮವಾರದಂದು ಬೆಳಗ್ಗೆ 11 ಗಂಟೆಗೆ ಕೃಷ್ಣರಾಜಸಾಗರದ ಶ್ರೀ ಕಾವೇರಿ ಮಾತೆ ಪ್ರತಿಮೆಯ ಬಳಿ ನಡೆಯಲಿದೆ.
ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಣೆ ಕಾರ್ಯಕ್ರಮವು ಜುಲೈ 29, ಸೋಮವಾರದಂದು ಮಧ್ಯಾಹ್ನ 3 ಗಂಟೆಗೆ ಬೀಚನಹಳ್ಳಿಯ ಕಬಿನಿ ಜಲಾಶಯದ ಬಳಿ ನಡೆಯಲಿದೆ.
ದೇಶದಲ್ಲೇ ಅತಿ ಹೆಚ್ಚು ‘ಸ್ಟಾರ್ಟ್ ಅಪ್’ಗಳು ನೋಂದಣಿಯಾಗಿರುವ 2ನೇ ರಾಜ್ಯ ‘ಕರ್ನಾಟಕ’ | Startups
ಉತ್ತರ ಕ್ಯಾಲಿಫೋರ್ನಿಯಾದಲ್ಲಿ 1,78,000 ಎಕರೆ ಪ್ರದೇಶಕ್ಕೆ ಬೆಂಕಿ:134 ಕಟ್ಟಡಗಳು ನಾಶ