ಬೆಂಗಳೂರು: ರಾಜ್ಯದಲ್ಲಿ ಮೀತಿ ಮೀರಿ ಬೈಕ್ ವಿಲೀಂಗ್ ಹಾವಾಳಿ ಹೆಚ್ಚಾಗಿದ್ದು, ಪುಂಡರು ದಿನ ನಿತ್ಯ ಬೈಕ್ ವೀಲಿಂಗ್ ಮಾಡುತ್ತ ಇತರ ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದಾರೆ.
ರಾಜ್ಯದ ಬಹುತೇಕ ಕಡೆಗಳಲ್ಲಿ ನಗರದ ಹೊರ ವಲಯದ ರಸ್ತೆಗಳಲ್ಲಿ ಬೈಕ್ ವಿಲೀಂಗ್ ಮಾಡುತ್ತಿರುವುದು ಹೆಚ್ಚುತ್ತಿದ್ದು, ಇದು ಪೊಲೀಸ್ ಇಲಾಖೆಗೆ ಕೂಡ ತಲೆನೋವಾಗಿ ಪರಿಣಾಮಿಸಿದೆ. ಅಚ್ಚರಿಯ ಸಂಗತಿ ಅಂದ್ರೆ ಬೈಕ್ ವಿಲೀಂಗ್ ಮಾಡೋ ವೇಳೇಯಲ್ಲಿ ಹೆಣ್ಣು ಮಕ್ಕಳು ಕೂಡ ಹಿಂದೆ ಕುಂತು ಪೋಸ್ ನೀಡುತ್ತಿರುವುದು ಹೆಚ್ಚುತ್ತಿದ್ದು, ಹುಡುಗಿಯರು ಕೂಡ ಶೋಕಿಗಾಗಿ ಬೈಕ್ ವಿಲೀಂಗ್ ವೇಳೇ ಇರೋದು ಹೆಚ್ಚುತ್ತಿದೆ. ಇವೆಲ್ಲದರ ನಡುವೆ ಬೈಕ್ ವಿಲೀಂಗ್ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಪೊಲೀಸರು ಸಂಬಂಧಪಟ್ಟವರನ್ನು ಬಂಧಿಸಿ ಇಲ್ಲವೇ ದಂಡ ವಿಧಿಸುತ್ತಾರೆ. ಆದರೆ ಇದಾವುದು ಕೂಡ ಸರಿಯಾಗಿ ಕಾರ್ಯಗತಗೊಳ್ಳದೇ ಇಡೀ ಪೊಲೀಸ್ ವ್ಯವಸ್ಥೆಗೆ ಬೈಕ್ ವಿಲೀಂಗ್ ಮಾಡೋ ಪುಂಡರು ಟಾಂಗ್ ನೀಡುತ್ತಿದ್ದಾರೆ. ಅಸಲಿಗೆ ಬೈಕ್ ವಿಲೀಂಗ್ ಮಾಡೋರಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಅಂದ್ರೆ ಬೈಕ್ ಅನ್ನು ವಶಪಡಿಸಿಕೊಂಡು, ಮುಟ್ಟುಗೋಲು ಹಾಕಿಕೊಳ್ಳಬೇಕು ಇಲ್ಲವಾದಲ್ಲಿ ಬೈಕ್ ವಿಲೀಂಗ್ ಮಾಡೋರ ಹಾವಳಿ ನಿಲ್ಲುವುದಿಲ್ಲ ಅಂತ ಸಾರ್ವಜನಿಕರು ರಾಜ್ಯ ಪೊಲೀಸ್ ಇಲಾಖೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಗೃಹ ಇಲಾಖೆ ಮಾತ್ರ ಇದಾವುದನ್ನು ಕೂಡ ಕ್ಯಾರೆ ಎನ್ನದೇ ಇರುವುದು ಬೇಸರ ಮೂಡಿಸಿದೆ ಎನ್ನುತ್ತಾರೆ ನಾಗರೀಕರು.
ಬೈಕ್ ವಿಲೀಂಗ್ ಮಾಡೋದರಿಂದ ಅನೇಕ ಮಂದಿ ಸತ್ತು, ಸ್ವರ್ಗಕ್ಕೋ, ನರಕ್ಕೋ ಹೋಗಿದ್ದಾರೆ ಆದರೆ ಬೈಕ್ ವಿಲೀಂಗ್ ಮಾಡೋರು ಮಾತ್ರ ಬುದ್ದಿ ಕಲಿಯದೇ ಇರುವುದು ವಿಪರ್ಯಾಸ ಮೂಡಿಸಿದೆ.