ನವದೆಹಲಿ : ಕರ್ನಾಟಕದ ಕಾಡುಗೊಲ್ಲ, ಹಟ್ಟಿಗೊಲ್ಲ, ಅಡವಿಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರ್ಪಡೆ ಮಾಡುವ ಪ್ರಸ್ತಾವನೆಯನ್ನು ಮತ್ತೊಮ್ಮೆ ತರಿಸಿಕೊಂಡು ಪರಾಮರ್ಶೆ ಮಾಡಿ ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಬಗ್ಗೆ ಮನವಿ ಮಾಡಲಾಗಿದೆ.
ಕರ್ನಾಟಕದ ಕಾಡುಗೊಲ್ಲ ಹಟ್ಟಿಗೊಲ್ಲ ಅಡವಿಗೊಲ್ಲರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಸ್ತಾವನೆಯನ್ನು ರಿಜಿಸ್ಟರ್ ಜನರಲ್ ಆಪ್ ಇಂಡಿಯಾ ಅನುಮತಿಸಿಲ್ಲದೆ ಇರುವುದರಿಂದ ಅವರು ಅದಕ್ಕೆ ಸಹಮತಿ ನೀಡದೆ ಕರ್ನಾಟಕದ ಸರ್ಕಾರಕ್ಕೆ ಕಳುಹಿಸಿರುವುದು ದುರಾದೃಷ್ಟಕರ ಬೆಳವಣಿಗೆ R G I ರವರು 27/3/2024 ರಂದು ಸಹಮತಿ ನೀಡಲು ಅಥವಾ ಪ್ರಸ್ತಾವನೆಗೆ ಅನುಮೋದನೆ ನೀಡಲು ಸಾದ್ಯವಿಲ್ಲ ಎಂದು ಷರಾ ಬರೆದು ಕರ್ನಾಟಕ ಸರ್ಕಾರಕ್ಕೆ ವಾಪಸ್ ಕಳಿಸಿರುವುದರ ಹಿಂದೆ ದುಷ್ಟ ಶಕ್ತಿಗಳ ಕೈವಾಡವಿದೆ ಮತ್ತು RGI ಸರಿಯಾಗಿ ಪರಾಮರ್ಶೆ ಮಾಡದೆ ಹಿಂದಿರುಗಿಸಲಾಗಿದೆ.
ಸದರಿ ಪ್ರಸ್ತಾವನೆಯನ್ನು ಕರ್ನಾಟಕ ಸರ್ಕಾರ 2014 ರಲ್ಲಿ ಕಾಡುಗೊಲ್ಲರ ಕುಲ ಶಾಸ್ತ್ರ ಅಧ್ಯಯನದ ವರದಿಯನ್ನು ಸಚಿವ ಸಂಪುಟದ ಚರ್ಚಿಸಿ ಕರ್ನಾಟಕದ ಕಾಡುಗೊಲ್ಲರಿಗೆ ಎಸ್ ಟಿ ಪಟ್ಟಿಗೆ ಸೇರ್ಪಡೆಯಾಗಲು ಎಲ್ಲಾ ಲಕ್ಷಣಗಳನ್ನು ಗಮಸಿ ಅದನ್ನು ಅನುಮೋದನೆ ನೀಡಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡಲು ಕೆಂದ್ರ ಸರಕಾರಕ್ಕೆ ಶಿಪಾರಸ್ಸು ಮಾಡಿ ಕಳುಹಿಸಲಾಗಿತ್ತು.
ಸುಮಾರು ಹತ್ತು ವರ್ಷಗಳ ಕಾಲ RGI ರವರು ತಮ್ಮ ಕಚೇರಿಯಲ್ಲಿ ಅನಾವಶ್ಯಕವಾಗಿ ಇಟ್ಟು ಕೊಂಡು ನಂತರ ಅಗತ್ಯವಲ್ಲದ ಅವಶ್ಯಕತೆ ಇಲ್ಲದ ಆಕ್ಷೇಪಣೆ ಎತ್ತಿ ರಾಜ್ಯ ಸರ್ಕಾರಕೆ ಆಕ್ಷೇಪಣೆಗೆ ಉತ್ತರಿಸಲು ಎರಡು ಸಾರಿ ಕಳುಹಿಸಿತ್ತು ಎರಡೂ ಸಾರಿಯೂ ಕರ್ನಾಟಕ ಸರ್ಕಾರವು ಅಗತ್ಯ ದಾಖಲೆಯೊಂದಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿತ್ತು.
ಆದರೂ ಸಹ RGI ಕಾಡುಗೊಲ್ಲರ ಎಸ್ ಟಿ ಸೇರ್ಪಡೆ ಸಂಬಂಧಿಸಿದಂತೆ ಎಲ್ಲಾ ಬುಡಕಟ್ಟು ಜನಾಂಗದ ಗುಣಲಕ್ಷಣಗಳನ್ನು ಹೊಂದಿದ್ದರೂ ಸಹ ಜೊತೆಗೆ ಕುಲ ಶಾಸ್ತ್ರ ವರದಿಯು ಎಲ್ಲಾ ಬುಡಕಟ್ಟು ಲಕ್ಷಣ ಹೊಂದಿರುವ ಮತ್ತು ಎಸ ಟಿ ಸೇರ್ಪಡೆಗೆ ಯೊಗ್ಯವಾಗಿದ್ದರೂ ಸಹ RGI ಕಾಡುಗೊಲ್ಲ ಎಸ್ ಟಿ ಸೇರ್ಪಡೆ ಪ್ರಸ್ತಾವನೆಯನ್ನು ಸರಿಯಾಗಿ ಪರಾಮರ್ಶೆ ಮಾಡದೆ ಖುದ್ದು ಕರ್ನಾಟಕಕ್ಕೆ ಬಂದು ಕಾಡುಗೊಲ್ಲರ ಸ್ಥಿತಿ ಗತಿ ಆಚಾರ ವಿಚಾರ ಹುಟ್ಟು ಮುಟ್ಟು ಪೂಜೆ ಪುನಸ್ಕಾರ ಬಗ್ಗೆ ಮಾಹಿತಿ ಪಡೆಯದೆ ಪ್ರಸ್ತಾವನೆಗೆ ಸಹಮತಿ ನೀಡದೆ ಇರುವುದು ಕಾಡುಗೊಲ್ಲ ಜನಾಂಗಕ್ಕೆ ಮಾಡಿದ ಅನ್ಯಾಯವಾಗಿರುತ್ತದೆ.
ಅದ್ದರಿಂದ ತಾವುಗಳು ಈ ಕೂಡಲೇ ಮದ್ಯ ಪ್ರವೇಶ ಮಾಡಿ ಸದರಿ ಪ್ರಸ್ತಾವನೆಯನ್ನು ಮತ್ತೊಮ್ಮೆ ತರಿಸಿಕೊಂಡು ಪರಾಮರ್ಶೆ ಮಾಡಿ ಖದ್ದು ಕೆಂದ್ರ ಸರ್ಕಾವೇ ವಾತ್ಸವ ಮಾಹಿತಿ ಪಡೆದು ಕಾಡುಗೊಲ್ಲ ಜನಾಂಗವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಪ್ರಸ್ತಾವನೆಗೆ ಅನುಮೋದನೆ ಮತ್ತು ಸಹಮತಿ ಕೊಡಿಸಿ ಕಾಡುಗೊಲ್ಲ ಹಟ್ಟಿಗೊಲ್ಲ ಅಡವಿಗೊಲ್ಲ ಜನಾಂಗವನ್ನು ಎಸ ಟಿ ಪಟ್ಟಿಗೆ ಸೇರ್ಪಡೆ ಮಾಡಬೆಕೆಂದು ತಮ್ಮಲ್ಲಿ ಮನವಿಯನ್ನು ಮಾಡಿಕೊಳ್ಳುತ್ತೇವೆ. ಕರ್ನಾಟಕದ ರಾಜ್ಯದ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ್ಯಕ್ಷರಾದ ಸಿ ಶಿವುಯಾದವ್ ಮತ್ತು ರಾಜ್ಯ ಸಂಚಾಲರಾದ ಮಂಜಪ್ಪ ನವರು ನವದೆಹಲಿ ಸಚಿವರ ಅಪ್ತ ಕಾರ್ಯದರ್ಶಿಗೆ ಮನವಿ ನೀಡಿದರು.