ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅಧಿಕೃತ ನಿವಾಸ ಬದಲಾಗಿದೆ. ದೆಹಲಿಯ ಸುನ್ಹರಿ ಬಾಗ್ ರಸ್ತೆಯಲ್ಲಿರುವ ಐದನೇ ಸಂಖ್ಯೆಯ ಬಂಗಲೆ ಈಗ ಅವರ ಹೊಸ ವಿಳಾಸವಾಗಿದೆ. ಮೂಲಗಳ ಪ್ರಕಾರ, ಜನರಲ್ ಪೂಲ್’ನ ಈ ಟೈಪ್ 8 ಬಂಗಲೆಗೆ ರಾಹುಲ್ ಗಾಂಧಿ ಅನುಮೋದನೆ ನೀಡಿದ್ದಾರೆ. ಅಧಿಕೃತ ಹಂಚಿಕೆ ಮತ್ತು ಸೌಂದರ್ಯೀಕರಣದ ನಂತರ, ರಾಹುಲ್ ಗಾಂಧಿ ಈ ಸ್ಥಳಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ. ಪ್ರತಿಪಕ್ಷದ ನಾಯಕರಾಗಿ, ರಾಹುಲ್ ಅವರು ಕೇಂದ್ರ ಸಚಿವ ಸ್ಥಾನಮಾನದ ಪ್ರಕಾರ 8ನೇ ವಿಧದ ಬಂಗಲೆಯನ್ನ ಪಡೆಯಬಹುದು.
ಪ್ರಸ್ತುತ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯೊಂದಿಗೆ 10 ಜನಪಥ್’ನಲ್ಲಿ ವಾಸಿಸುತ್ತಿದ್ದಾರೆ, ಆದರೆ ಇದಕ್ಕೂ ಮೊದಲು, 2004ರಿಂದ ಏಪ್ರಿಲ್ 2023ರವರೆಗೆ, ರಾಹುಲ್ ಗಾಂಧಿಯವರ ವಿಳಾಸ 12, ತುಘಲಕ್ ಲೇನ್ ಆಗಿತ್ತು. ಕಳೆದ ವರ್ಷ ಮಾರ್ಚ್ನಲ್ಲಿ, ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಶಿಕ್ಷೆಗೆ ಗುರಿಯಾದ ನಂತರ, ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನ ರದ್ದುಗೊಳಿಸಲಾಯಿತು ಮತ್ತು 12, ತುಘಲಕ್ ಲೇನ್ನಲ್ಲಿರುವ ಅವರ ಬಂಗಲೆಯನ್ನ ಸಹ ಕಿತ್ತುಕೊಳ್ಳಲಾಯಿತು. ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್’ನಿಂದ ರಿಲೀಫ್ ಸಿಕ್ಕರೂ ಹೊಸ ಬಂಗಲೆ ಸಿಕ್ಕಿರಿಲಿಲ್ಲ.
ಕಳೆದ ವರ್ಷ ಸಂಸತ್ ಸದಸ್ಯತ್ವ ವಾಪಸ್ ಪಡೆದ ಬಳಿಕ ಲೋಕಸಭೆಯ ವಸತಿ ಸಮಿತಿ 12 ತುಘಲಕ್ ಲೇನ್’ನಲ್ಲಿರುವ ಬಂಗಲೆಯನ್ನ ರಾಹುಲ್ ಗಾಂಧಿಗೆ ಮಂಜೂರು ಮಾಡಿದಾಗ ನನ್ನ ಮನೆ ಇಡೀ ಭಾರತ ಎಂದು ಹೇಳಿದ್ದರು. ಮೋದಿ ಉಪನಾಮ ಪ್ರಕರಣದಲ್ಲಿ ಕಳೆದ ವರ್ಷ ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿತ್ತು. ಈ ಕಾರಣಕ್ಕಾಗಿ ಅವರ ಸದಸ್ಯತ್ವವನ್ನು ಕಳೆದುಕೊಂಡರು.
‘ಅರವಿಂದ್ ಕೇಜ್ರಿವಾಲ್ ಬೇಡಿಕೆ ಸಮಂಜಸ’ : ವಕೀಲರೊಂದಿಗೆ ಹೆಚ್ಚುವರಿ ಸಭೆ ನಡೆಸಲು ಹೈಕೋರ್ಟ್ ಅನುಮತಿ
BREAKING : ಮೌರಿಟಾನಿಯಾದಲ್ಲಿ ಘೋರ ದುರಂತ ; 300 ಪ್ರಯಾಣಿಕರ ಹೊತ್ತ ಹಡಗು ಮುಳುಗಡೆ, 15 ಸಾವು, 120 ಜನರ ರಕ್ಷಣೆ
7ನೇ ವೇತನ ಆಯೋಗ ಜಾರಿ ಹಿನ್ನಲೆ: ಜು.29ರಿಂದ ನಡೆಸಲು ಉದ್ದೇಶಿಸಿದ್ದ ರಾಜ್ಯ ಸರ್ಕಾರಿ ನೌಕರರ ಮುಷ್ಕರ ಮುಂದೂಡಿಕೆ