ಬೆಂಗಳೂರು: ರಾಜ್ಯ ಸರ್ಕಾರದಿಂದ 7ನೇ ವೇತನ ಆಯೋಗದ ವರದಿಯಂತೆ ವೇತನ ಶಿಫಾರಸ್ಸುಗಳನ್ನು ಅನುಷ್ಟಾನಗೊಳಿಸುವ ಸಂಬಂಧ ಅಧಿಕೃತ ಆದೇಶ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ದಿನಾಂಕ 29-07-2024ರಿಂದ ನಡೆಸಲು ಉದ್ದೇಶಿಸಲಾಗಿದ್ದಂತ ರಾಜ್ಯ ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿಯ ಮುಷ್ಕರವನ್ನು ಮುಂದೂಡಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಕ್ಷರಿ ಅವರು ಪತ್ರಿಕಾ ಪ್ರಕಟನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದಿನಾಂಕ 23-07-2024ರಂದು ರಾಜ್ಯ ವೇತನ ಆಯೋಗದ ವರದಿ ಅನುಷ್ಠಾನ ಹಾಗೂ ಎನ್ ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ಸಂಬಂಧ ಸಂಘದ ಸಭೆ ನಡೆಯಿತು ಎಂದಿದ್ದಾರೆ.
ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ದಿನಾಂಕ 22-07-2024ರಂದು ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಆದೇಶಿಸಿದೆ. ಹೀಗಾಗಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗೆ ಅಭಿನಂದನೆಗಳನ್ನು ಸಲ್ಲಿಸಲು ನಿರ್ಣಯ ಕೈಗೊಳ್ಳಲಾಗಿದೆ ಅಂತ ತಿಳಿಸಿದ್ದಾರೆ.
ಎನ್ ಪಿಎಸ್ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಮರುಸ್ಥಾಪಿಸುವ ಭಾಗವಾಗಿ ಸರ್ಕಾರದ ಉನ್ನತ ಅಧಿಕಾರಿಗಳ ತಂಡ ಓಪಿಎಸ್ ಜಾರಿಗೊಳಿಸಿರುವಂತ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿ ವರದಿ ಸಲ್ಲಿಸರು ಸರ್ಕಾರ ಈಗಾಗಲೇ ಕ್ರಮವಿಸುತ್ತಿದೆ. ಶೀಘ್ರದಲ್ಲೇ ವರದಿ ಪಡೆದು ಹಳೆಯ ಪಿಂಚಣಿ ಯೋಜನೆ ಮರುಸ್ಥಾಪಿಸುವ ಭರವಸೆಯನ್ನು ಸಿಎಂ, ಡಿಸಿಎಂ ನೀಡಿರುತ್ತಾರೆ ಎಂದಿದ್ದಾರೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನದಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಆಗಸ್ಟ್ ತಿಂಗಳಲ್ಲಿ ಯೋಜನೆಯನ್ನು ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡಿರುತ್ತದೆ ಅಂತ ತಿಳಿಸಿದ್ದಾರೆ.
ಈ ಎಲ್ಲಾ ಕಾರಣದಿಂದಾಗಿ ದಿನಾಂಕ 29-07-2024ರಿಂದ ನಡೆಸಲು ಉದ್ದೇಶಿಸಿದ್ದಂತ ರಾಜ್ಯ ಸರ್ಕಾರಿ ನೌಕರರ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಅಂತ ಹೇಳಿದ್ದಾರೆ.
‘ಆರೋಗ್ಯ ಇಲಾಖೆ’ಯ ‘NHM ಗುತ್ತಿಗೆ ನೌಕರ’ರ ಖಾಯಂ ಯಾವಾಗ?: ‘ಸಿಎಂ ಸಿದ್ಧರಾಮಯ್ಯ’ಗೆ ನೌಕರರ ಪ್ರಶ್ನೆ
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana
BIG NEWS: ಆ.1ರಿಂದ ‘ಆರೋಗ್ಯ ಇಲಾಖೆ’ಯ ನೌಕರರು ‘ರಿಯಲ್ ಟೈಮ್ ಅಟೆಂಡೆನ್ಸ್ ಸಿಸ್ಟಮ್ ಹಾಜರಾತಿ’ ದಾಖಲು ಕಡ್ಡಾಯ