ಬೆಂಗಳೂರು: ರಾಜ್ಯದ ರೈತರಿಗೆ ಯಾವುದೇ ಕಂಪೆನಿಗಳೂ ಬೆಳೆ ವಿಮೆ ನಿರಾಕರಿಸುವಂತಿಲ್ಲ ಎಂಬುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಖಡಕ್ ಆದೇಶ ಮಾಡಿದ್ದಾರೆ.
ಕೆಲವು ವಿಮಾ ಕಂಪೆನಿಗಳು ರೈತರಿಗೆ ಬೆಳೆ ವಿಮೆ ನೀಡಲು ನಿರಾಕರಿಸುತ್ತಿವೆ. ಈ ಬಗ್ಗೆ ಬಿಜೆಪಿ ಸದಸ್ಯ ಕೇಶವ ಪ್ರಸಾದ್ ಅವರು ಸದನದ ಗಮನ ಸೆಳೆದರು. ಈ ಪ್ರಶ್ನೆಗೂ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, “ಕೇಂದ್ರ ಸರ್ಕಾರ ಗೊತ್ತಿದ್ದೋ ಗೊತ್ತಿಲ್ಲದೆಯೋ ಸರ್ಕಾರದಿಂದ ಬೆಳೆ ಪರಿಹಾರ ಪಡೆಯುವ ರೈತರಿಗೆ ಬೆಳೆ ವಿಮೆ ನೀಡುವಂತಿಲ್ಲ ಎಂದು ಬರ ಕೈಪಿಡಿಯಲ್ಲಿ ಹೇಳಿದ್ದಾರೆ. ಕಳೆದ ವರ್ಷ ಕೇಂದ್ರ ಗೃಹ ಮಂತ್ರಿಗಳು ಸಭೆ ಕರೆದಿದ್ದರು. ನಾನೂ ಆ ಸಭೆಯಲ್ಲಿ ಪಾಲ್ಗೊಂಡಿದ್ದೆ. ಸಭೆಯಲ್ಲಿ ಬರ ಕೈಪಿಡಿಯಲ್ಲಿ ಉಲ್ಲೇಖಿಸಿರುವ ಬೆಳೆ ವಿಮೆ ವಿಚಾರದ ಬಗ್ಗೆ ನಾನು ಗಮನ ಸೆಳೆದಿದ್ದೆ.
ಬೆಳೆ ವಿಮೆಗೂ ನಾವು ಕೊಡುವ ಪರಿಹಾರಕ್ಕೂ ಸಂಬಂಧ ಇಲ್ಲ, ಇದು ತಪ್ಪಾಗುತ್ತದೆ. ಸರ್ಕಾರದ ಇಂತಹ ನಡೆ ವಿಮಾ ಕಂಪೆನಿಗೆ ದುರ್ಲಾಭ ಮಾಡಿಕೊಟ್ಟಂತಾಗುತ್ತದೆ ಎಂದು ನಾನು ಹೇಳಿದಾಗ ಕೇಂದ್ರ ಸರ್ಕಾರ ಗಾಬರಿಯಾಗಿ ಇದು ಹೇಗಾಯ್ತು ಎಂದು ಕಳೆದ ಅಕ್ಟೋಬರ್ ನಲ್ಲಿ ಡಿಲಿಟ್ ಮಾಡಿದ್ದಾರೆ. ಹೀಗಾಗಿ ಹಳೆಯ ಕೈಪಿಡಿ ಆಧಾರದಲ್ಲಿ ಯಾರಾದ್ರೂ ಬೆಳೆ ವಿಮೆ ನೀಡಲು ನಿರಾಕರಿಸಿದರೆ ಅದು ತಪ್ಪಾಗುತ್ತೆ. ಅಂತಹ ಪ್ರಕರಣಗಳು ಇದ್ರೆ ನಮ್ಮ ಗಮಕ್ಕೆ ತನ್ನಿ ನಾವು ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿ ಸರಿಪಡಿಸುತ್ತೇವೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದರು.
38 ಲಕ್ಷಕ್ಕೂ ಹೆಚ್ಚು ರೈತರಿಗೆ ಬರ ಪರಿಹಾರ ವಿತರಣೆ: ಸಚಿವ ಕೃಷ್ಣಭೈರೇಗೌಡ
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana