ಬೆಂಗಳೂರು: ಬೆಳಗಾವಿ ಜಿಲ್ಲೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುತ್ತದೆ ಎಂಬುದಾಗಿ ಸಾರಿಗೆ ಹಾಗೂ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಪ್ರಾಧಿಕಾರಗಳ ರಚನೆಯ ಉದ್ದೇಶವು ಸಸಿಯೊಂದು ಹೆಮ್ಮರವಾಗಿ ಬೆಳೆದು ಜನರಿಗೆ ನೆರಳು ಮತ್ತು ಫಲ ನೀಡುವಂತಹ ಕಲ್ಪನೆ ಹೊಂದಿದೆ. ಪ್ರಾಧಿಕಾರಗಳ ರಚನೆಯೊಂದಿಗೆ ಸಮಗ್ರ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ.
ಇದನ್ನು ಮನಗೊಂಡಿರುವ ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಕಳೆದ ಒಂದು ವರ್ಷದ ಅವಧಿಯಲ್ಲಿ ಚಾಮುಂಡಿ ಬೆಟ್ಟ ಕ್ಷೇತ್ರ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ,ಹುಲಿಗೆಮ್ಮ ಕ್ಷೇತ್ರಗಳನ್ನು ಪ್ರಾಧಿಕಾರಗಳಾಗಿ ರಚಿಸಿದ್ದಾರೆ. ಆ ನಿಟ್ಟಿನಲ್ಲಿ ಶ್ರೀ ರೇಣುಕಾ ಯಲ್ಲಮ್ಮ ಕ್ಷೇತ್ರ ನೂತನವಾಗಿ ಸೇರ್ಪಡೆಯಾಗುತ್ತಿದೆ ಎಂದಿದ್ದಾರ
ಅಂದಹಾಗೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನವು “ಎ” ವರ್ಗದ ದೇವಸ್ಥಾನವಾಗಿದೆ. ಒಟ್ಟು 88. 37 ಎಕರೆ ವಿಸ್ತೀರ್ಣ ಹೊಂದಿದೆ. ಶ್ರೀ ರೇಣುಕಾ ಯಲ್ಲಮ್ಮ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧಿನಿಯಮ ಮತ್ತು ಉದ್ದೇಶಿತ ಪ್ರಾಧಿಕಾರದೊಂದಿಗೆ Master Plan ಅಭಿವೃದ್ಧಿಪಡಿಸಿ ಭಕ್ತಾಧಿಗಳಿಗೆ ಮತ್ತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಪುಣ್ಯ ಕ್ಷೇತ್ರವನ್ನಾಗಿ ಸಮಗ್ರ ಅಭಿವೃದ್ಧಿಪಡಿಸಲಾಗುವುದು.
ರಸ್ತೆ, ಕುಡಿಯುವ ನೀರು, ಗ್ರಾಮ ನೈರ್ಮಲ್ಯಗಳಂತಹ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ. ಸಮರ್ಪಕವಾಗಿ ಭಕ್ತಾಧಿಗಳಿಗೆ ವಸತಿ, ದರ್ಶನ, ಪ್ರಸಾದ ವಿನಿಯೋಗ ಸೌಲಭ್ಯ ಒದಗಿಸುವುದು. ದೇವಸ್ಥಾನದ ಆದಾಯ ವೃದ್ಧಿಯಾಗಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ.
ಅಂದಹಾಗೇ ಸದರಿ ವಿಧೇಯಕವು ಇಂದು ವಿಧಾನಸಭೆ ಹಾಗೂ ವಿಧಾನಪರಿಷತ್ ಗಳಲ್ಲಿ ಮಂಡಿಸಲಾಗಿದ್ದು, ಅವಿರೋಧವಾಗಿ ಮಸೂದೆಗೆ ಅಂಗೀಕಾರ ದೊರತಿದೆ.
ಅಲ್ಪಸಂಖ್ಯಾತ ಸಮುದಾಯದವರ ಗಮನಕ್ಕೆ: IAS, KAS ಪರೀಕ್ಷಾ ಪೂರ್ವ ಅರ್ಜಿ ಆಹ್ವಾನ
ಇನ್ಮುಂದೆ ನಿಮ್ಮ ಭೂಮಿಗೂ ಸಿಗುತ್ತೆ ʻಆಧಾರ್ʼ : ʻಭೂ ಆಧಾರ್ʼ ಕುರಿತು ಇಲ್ಲಿದೆ ಮಾಹಿತಿ | Bhu Aadhar yojana
BIG NEWS: ಆ.1ರಿಂದ ‘ಆರೋಗ್ಯ ಇಲಾಖೆ’ಯ ನೌಕರರು ‘ರಿಯಲ್ ಟೈಮ್ ಅಟೆಂಡೆನ್ಸ್ ಸಿಸ್ಟಮ್ ಹಾಜರಾತಿ’ ದಾಖಲು ಕಡ್ಡಾಯ