ಹಾಸನ: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ ಅವರು ನಿಧನರಾಗಿದ್ದಾರೆ. ಅವರಿಗೆ 95 ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಅಜ್ಜಿ ಮಲ್ಲಮ್ಮಗೆ 5 ಜನ ಮಕ್ಕಳಿದ್ದರು. ಅದರಲ್ಲಿ ಡಾಲಿ ಅವರ ತಂದೆ ಅಡವಿಸ್ವಾಮಿ ಎರಡನೇಯವರಾಗಿದ್ದಾರೆ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಮಲ್ಲಮ್ಮ ಕೂಡ ಬಂದಿದ್ದರು. ಆಗ ಮೊಮ್ಮಗ ಡಾಲಿಯ ಮದುವೆ ಬಗ್ಗೆ ಮಾತನಾಡಿದ್ದರು. ಧನಂಜಯಗೆ ಬೇಗ ಮದುವೆ ಮಾಡಿಸಬೇಕು ಎಂದು ಅಜ್ಜಿ ಹೇಳಿದನ್ನು ಸ್ಮರಿಸಬಹುದು.