ನವದೆಹಲಿ : ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ಅವರ ಪುತ್ರ ಆರ್ಯನ್ ಖಾನ್ ಅವರನ್ನು ಮಾದಕವಸ್ತು ಪ್ರಕರಣ ಸಂಬಂಧ ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಬಿಜೆಪಿ ಕಾರ್ಯಕರ್ತ ವಿಕಾಸ್ ಅಹಿರ್ ನನ್ನು ಡ್ರಗ್ಸ್ ಕೇಸ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗುಜರಾತ್ ಸೂರತ್ ನಗರ ಪೊಲೀಸರು ಐಸ್ ಕ್ರೀಮ್ ಅಂಗಡಿಯ ಮೂಲಕ ಕೊಕೇನ್ ಸಾಗಿಸುತ್ತಿದ್ದ ಆರೋಪದ ಮೇಲೆ ವಿಕಾಸ್ ಅಹಿರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ವಿಕಾಸ್ ಅಹಿರ್ ನಿಂದ 354 ಗ್ರಾಂ ಎಂಡಿ ಫಾರ್ಮಾಸ್ಯುಟಿಕಲ್ಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಕಾಸ್ ಅಹಿರ್ ಆರ್ಯನ್ ಖಾನ್ ಅವರನ್ನು 2021 ರಲ್ಲಿ ಕಾರ್ಡೆಲಿಯಾ ಕ್ರೂಸ್ ಪ್ರಕರಣ ಸಂಬಂಧ ವಿಕಾಸ್ ಅಹಿರ್ ತೀವ್ರ ವಾಗ್ದಾಳಿ ನಡೆಸಿದ್ದರು. ಬಳಿಕ ಶಾರುಖ್ ಖಾನ್ ಅವರ ಪಠಾಣ್ ಚಿತ್ರಕ್ಕೆ ಬಹಿಷ್ಕರಿಸುವಂತೆ ಕರೆ ನೀಡಿದ್ದರು.