ಮಂಡ್ಯ : ಸ್ಟೋನ್ ಕ್ರಷರ್ ಗೆ ಎನ್‌ಒಸಿ ನೀಡಲು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು 1 ಲಕ್ಷ ರೂಪಾಯಿಗಳನ್ನು ಪಡೆಯುವ ವೇಳೆ ಶ್ರೀರಂಗಪಟ್ಟಣ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ ಹಾಗೂ ವಾಹನ ಚಾಲಕ ಪ್ರಸನ್ನ ಕುಮಾರ್ ಮಂಗಳವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸಂತೋಷ್ ಎಂಬುವವರಿಂದ ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಆರ್.ಎಫ್.ಒ. ಪುಟ್ಟಸ್ವಾಮಿ ಮತ್ತು ಚಾಲಕ ಪ್ರಸನ್ನಕುಮಾರ್ ಅವರನ್ನು ಬಂಧಿಸಿದ್ದಾರೆ. ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ವರದಿ : ಗಿರೀಶ್ ರಾಜ್, ಮಂಡ್ಯ
ಸಾಗರದಲ್ಲಿ ಶಾಸಕರ ಸೂಚನೆ ಬೆನ್ನಲ್ಲೇ ‘ಕೆಳದಿ PDO ಅಷ್ಪಕ್ ಅಹಮದ್’ ಅಲರ್ಟ್: ರಸ್ತೆಯಲ್ಲಿ ನಿಂತಿದ್ದ ‘ನೀರು ಕ್ಲಿಯರ್’
‘ಶಿವಮೊಗ್ಗ ಜಿಲ್ಲೆ’ಯಲ್ಲೊಂದು ‘ಬಹುದೊಡ್ಡ ಹಗರಣ’: ‘ಸಹಕಾರ ಸಂಘ’ಕ್ಕೆ ಕಟ್ಟಿದ ಹಣ ‘ಕಾರ್ಯದರ್ಶಿ ಪಂಗನಾಮ’