ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಸಾಗರ, ಹೊಸನಗರ ತಾಲ್ಲೂಕಿನ ಅನೇಕ ಕಡೆಯಲ್ಲಿ ಜನರು ಸಂತ್ರಸ್ತರಾಗಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತದಿಂದ ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಮನೆ ಹಾನಿಗೆ 5 ಲಕ್ಷ ಪರಿಹಾರ ಮಂಜೂರು ಮಾಡಬೇಕು ಅಂತ ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಅಣಲೇಕೊಪ್ಪದಲ್ಲಿರುವಂತ ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇಡೀ ರಾಜ್ಯಾಧ್ಯಂತ ಮಳೆ ಆಗುತ್ತಿದೆ. ಮಲೆನಾಡಿನಲ್ಲಿ ಹೆಚ್ಚಾಗೇ ಸುರಿಯುತ್ತಿದೆ. ಮಳೆಯಿಂದಾಗಿ ಸಾಗರ, ಹೊಸನದ ಹಲವೆಡೆ ಮನೆ ಬಿದ್ದಿವೆ. ಮಳೆಹಾನಿಯಿಂದ ಜನರು ಸಂತ್ರಸ್ತರಾಗಿದ್ದಾರೆ ಎಂದರು.
ಮನೆಹಾನಿಗೆ ಕೂಡಲೇ 5 ಲಕ್ಷ ಪರಿಹಾರ ಕೊಡಿ
2019ರಲ್ಲಿ ಮಳೆಹಾನಿಯಾದವರಿಗೆ ಮನೆ ಕಟ್ಟಿಸಿಕೊಡುವ ಕೆಲಸ ಮಾಡಿದ್ದೇವೆ. 5 ಲಕ್ಷದವರೆಗೆ ಪರಿಹಾರ ಕೊಟ್ಟಿದ್ದೇವೆ. 1.5 ಲಕ್ಷ ಭಾಗಶಹ ಮಳೆಹಾನಿಗೆ, 10,000 ತತ್ ಕ್ಷಣದಲ್ಲಿ ಪರಿಹಾರವನ್ನು ನೀಡಿದ್ದೇವೆ ಎಂದು ಅವರು ತಿಳಿಸಿದರು.
ಸಾಗರ ತಾಲ್ಲೂಕಿನಲ್ಲಿ ಭಾರೀ ಮಳೆಯಿಂದಾಗಿ 48 ಮನೆಗಳು ಕುಸಿದು ಬಿದ್ದಿವೆ. ಹೊಸನಗರದಲ್ಲಿ 28 ಮನೆಗಳು ಬಿದ್ದಿದ್ದಾವೆ. ಮನೆ ಹಾನಿಗೊಂಡವರಿಗೆ ನಿಮ್ಮ ಹೆಸರಿಗೆ ಮನೆಯಿಲ್ಲ, ಸೈಟಿಲ್ಲ, ಖಾತಿಯಿಲ್ಲ. ಹಕ್ಕುಪತ್ರವಿಲ್ಲ ಅನ್ನೋ ಸಬೂಬು ಹೇಳದೇ, ಸಂತ್ರಸ್ತರಿಗೆ ಕೂಡಲೇ ಪರಿಹಾರವನ್ನು ವಿತರಿಸುವಂತೆ ತಾಲ್ಲೂಕು ಆಡಳಿತ ಕ್ರಮವಹಿಸಬೇಕು ಅಂತ ಒತ್ತಾಯಿಸಿದರು.
ಮಳೆಯಿಂದ ಉಂಟಾದಂತ ಮನೆಹಾನಿಗೆ 5 ಪರಿಹಾರ ನೀಡಬೇಕು. ಭಾಗಶಹ ಹಾನಿಗೆ 1.5 ಲಕ್ಷ, ತಕ್ಷಣವೇ 20,000 ಪರಿಹಾರವನ್ನು ನೀಡಿ, ಸಂತ್ರಸ್ತರ ನೆರವಿಗೆ ಧಾವಿಸುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರದಿಂದ ಮಳೆಹಾನಿಗೆ ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಟಾಸ್ಕ್ ಪೋರ್ಸ್ ರಚಿಸಿರುವುದಾಗಿ ಹೇಳಿದೆ. ನಾವು ಈ ಹಿಂದೆ ಕೋವಿಡ್ ಟೈಮ್ ನಲ್ಲಿಯೇ ರಚನೆ ಮಾಡಿದ್ದೇವೆ. ಟಾಸ್ಕ್ ಪೋರ್ಸ್ ರಚಿಸಿರೋದು ಸಂತಸದ ಸಂಗತಿ. ಆದ್ರೇ ಮಳೆಹಾನಿಗೆ ಪರಿಹಾರ ಕೊಡೋದಕ್ಕೆ ಹಣ ಇಲ್ಲ ಅಂದ್ರೆ ಏನು ಮಾಡ್ತಾರೆ ಅಂತ ಪ್ರಶ್ನಿಸಿದರು.
ಡೆಂಗ್ಯೂ ಜ್ವರ ತುಂಬಾ ಜಾಸ್ತಿ ಆಗುತ್ತಿದೆ. ಗೌತಮಪುರದಲ್ಲಿ ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾನೆ. ಡೆಂಗ್ಯೂ ಹೆಚ್ಚಾಗುತ್ತಿರುವ ಕಾರಣ, ನಿಯಂತ್ರಣ ಕ್ರಮವಗಳನ್ನು ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತ ಕೈಗೊಳ್ಳಬೇಕು ಎಂದರು.
ಕಾಂಗ್ರೆಸ್ ಪುಡಾರಿಗಳು ಎಂಬ ಪದ ಬಳಸಿಲ್ಲ
ನಾನು ಕಾಂಗ್ರೆಸ್ ಪುಡಾರಿಗಳು ಎಂಬ ಪದ ಬಳಸಿದ್ದಾಗಿ ಆರೋಪಿಸಿದ್ದಾರೆ. ಆದರೇ ನಾನು ಎಲ್ಲಿಯೂ ಆ ಪದವನ್ನು ಬಳಸಿಲ್ಲ. ನಾನು ಪದವನ್ನೇ ಬಳಸಿಲ್ಲ ಎಂದ ಮೇಲೆ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಅಂತ ಸ್ಪಷ್ಟ ಪಡಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿಡಿ ಮೇಘರಾಜು ಮಾತನಾಡಿ, ರಾಜ್ಯದಲ್ಲಿ ಕಣ್ಣಿದ್ದು ಕುರುಡು, ಕಿವಿಯಿದ್ದು ಕಿವುಡಾಗಿರುವಂತ ಸರ್ಕಾರವಿದೆ. ಜಿಲ್ಲಾ ಉಸ್ತುವಾರಿ ಸಚಿವರು ನೆಪಮಾತ್ರಕ್ಕೆ ನೆರೆ ವೀಕ್ಷಣೆಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಹಗರಣಗಳಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿ ಹೋಗಿದೆ. ಇದು ಹಗರಣಗಳ ಸರ್ಕಾರ. ಲೂಟಿ ಕೋರ ಸರ್ಕಾರ. ಜನರು ಇಡೀ ಶಾವನ್ನೇ ಈ ಸರ್ಕಾರಕ್ಕೆ ಹಾಕುತ್ತಿದ್ದಾರೆ ಎಂಬುದಾಗಿ ಹೇಳಿದರು.
ಸಾಗರ ನಗರ ನೀರಿನ ಸಮಸ್ಯೆ ಉಂಟಾಗಿದೆ. ಸಾಗರ ತಾಲ್ಲೂಕಿನ ಬಿಜೆಪಿ ಮುಖಂಡ ಗಣೇಶ್ ಪ್ರಸಾದ್ ನೇತೃತ್ವದಲ್ಲಿ ನೀರು ಕೊಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಮ್ಮ ಕುಟುಂಬದಲ್ಲಿ ಯಾವುದೇ ಬಿರುಕಿಲ್ಲ
ಇದೇ ವೇಳೆ ಮಾತನಾಡಿದಂತ ಬಿಜೆಪಿ ಮುಖಂಡ ರಾಜನಂದಿನಿ ಕಾಗೋಡು ಅವರು ನಮ್ಮ ಕುಟುಂಬದ ನಡುವೆ ಬಿರುಕು ಉಂಟಾಗಿದೆ ಅಂತ ಸುದ್ದಿಗಳು ಹರಿದಾಡುತ್ತಿವೆ. ಆದ್ರೇ ಅದ್ಯಾವುದೇ ಥರದದ್ದು ನಮ್ಮ ಕುಟುಂಬದಲ್ಲಿ ಇಲ್ಲ. ಇದು ಬರೀ ಕುಟುಂಬ ಹೊಡೆಯೋ ಕೆಲಸದ ಮಾತಾಗಿದೆ. ನಮ್ಮ ಕುಟುಂಬದ ಬಗ್ಗೆ ಯಾಕೆ ಹೀಗೆ ಮಾತಾಡ್ತಿದ್ದಾರೋ ಗೊತ್ತಿಲ್ಲ. ನಮ್ಮ ಕುಟುಂಬ ಹೊಡೆದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ನಾನು ಬಿಜೆಪಿ ನಾಯಕತ್ವ ಒಪ್ಪಿ ಆಚೆ ಬಂದಿದ್ದೇನೆಯೇ ಹೊರತು ಕುಟುಂಬದಿಂದ ಹೊರ ಬಂದಿಲ್ಲ. ನನಗೆ ಎಲ್ಲಿ ಇರೋದಕ್ಕೆ ಆಗಲಿಲ್ಲವೋ ಅಲ್ಲಿಂದ ಆಚೆ ಬಂದಿದ್ದೇನೆ. ಹಾಗಂತ ಕುಟುಂಬದಿಂದ ಅಲ್ಲ ಎಂಬುದಾಗಿ ತಿಳಿಸಿದದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು, ಸಾಗರ ನಗರ ಮಂಡಲ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಸಾಗರ ನಗರಸಭೆ ಸದಸ್ಯ ವಿ.ಮಹೇಶ್, ಮಾಜಿ ನಗರಸಭೆ ಸದಸ್ಯ ಜಿ.ಕೆ ಭೈರಪ್ಪ, ರವಿ ಬಸ್ರಾಣಿ, ಬಿಜೆಪಿ ಮುಖಂಡೆ ರಾಜನಂದಿನಿ ಕಾಗೋಡು, ಸತೀಶ್ ಮೊಗವೀರ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಸಾಗರದಲ್ಲಿ ಶಾಸಕರ ಸೂಚನೆ ಬೆನ್ನಲ್ಲೇ ‘ಕೆಳದಿ PDO ಅಷ್ಪಕ್ ಅಹಮದ್’ ಅಲರ್ಟ್: ರಸ್ತೆಯಲ್ಲಿ ನಿಂತಿದ್ದ ‘ನೀರು ಕ್ಲಿಯರ್’
‘ಶಿವಮೊಗ್ಗ ಜಿಲ್ಲೆ’ಯಲ್ಲೊಂದು ‘ಬಹುದೊಡ್ಡ ಹಗರಣ’: ‘ಸಹಕಾರ ಸಂಘ’ಕ್ಕೆ ಕಟ್ಟಿದ ಹಣ ‘ಕಾರ್ಯದರ್ಶಿ ಪಂಗನಾಮ’