ನವದೆಹಲಿ : ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಲವು ವಾರಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿವೆ. ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯಿಂದಾಗಿ ಅಲ್ಲಿ ಗಲಭೆಗಳು ನಡೆದಿವೆ. ಈಗ, ಅಲ್ಲಿನ ಹದಗೆಡುತ್ತಿರುವ ಪರಿಸ್ಥಿತಿಗಳ ದೃಷ್ಟಿಯಿಂದ, 2024ರ ಮಹಿಳಾ ಟಿ20 ವಿಶ್ವಕಪ್ ಆಯೋಜಿಸುವ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಶೀಘ್ರದಲ್ಲೇ ದೊಡ್ಡ ನಿರ್ಧಾರವನ್ನ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.
ಈ ವರ್ಷ ಅಕ್ಟೋಬರ್ 3ರಿಂದ ಅಕ್ಟೋಬರ್ 20ರವರೆಗೆ ಬಾಂಗ್ಲಾದೇಶದಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಯಲಿದೆ. ವರದಿ ಪ್ರಕಾರ, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಗಲಭೆಗಳ ಮೇಲೆ ಐಸಿಸಿ ಸೂಕ್ಷ್ಮವಾಗಿ ಗಮನಿಸುತ್ತಿದೆ.
ವರದಿ ಪ್ರಕಾರ, ಐಸಿಸಿ ಮೂಲವೊಂದು, “ಬಾಂಗ್ಲಾದೇಶದ ಗಲಭೆಗಳ ಮೇಲೆ ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಆದರೆ ಪಂದ್ಯಾವಳಿ ನಡೆಯಲು ಇನ್ನೂ ಸಾಕಷ್ಟು ಸಮಯವಿದೆ. ಕಳೆದ 24 ಗಂಟೆಗಳಲ್ಲಿ ಅಲ್ಲಿನ ಪರಿಸ್ಥಿತಿ ಸುಧಾರಿಸಿದೆ” ಇತ್ತೀಚೆಗೆ ಕೊಲಂಬೊದಲ್ಲಿ ಐಸಿಸಿ ಸಭೆಯನ್ನ ಕರೆದಿತ್ತು, ಅದರಲ್ಲಿ ಮಹಿಳಾ ಟಿ20 ವಿಶ್ವಕಪ್ ಬಗ್ಗೆ ಸದ್ಯಕ್ಕೆ ಪ್ರಸ್ತಾಪಿಸಲಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಆದಾಗ್ಯೂ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಪರಿಸ್ಥಿತಿಯನ್ನ ಅರಿತುಕೊಂಡಿದೆ.
ವಿಶ್ವಕಪ್ ಯಾವಾಗ ನಡೆಯಲಿದೆ.?
ಮಹಿಳೆಯರ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 20ರವರೆಗೆ ನಡೆಯಲಿದೆ. ಆತಿಥೇಯ ಬಾಂಗ್ಲಾದೇಶದ ಹೊರತಾಗಿ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 10 ತಂಡಗಳು ಈ ಕೂಟದಲ್ಲಿ ಭಾಗವಹಿಸಲಿದ್ದು, ಇದನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಭಾರತವಿದೆ. ಆಯಾ ಗುಂಪಿನಲ್ಲಿ ಅಗ್ರ-2 ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಲಿವೆ ಮತ್ತು ಪಂದ್ಯಾವಳಿಯ ಫೈನಲ್ ಅಕ್ಟೋಬರ್ 20 ರಂದು ನಡೆಯಲಿದೆ. 2026ರ ವಿಶ್ವಕಪ್’ನಲ್ಲಿ 12 ತಂಡಗಳ ನಿಬಂಧನೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
BREAKING : INS ‘ಬ್ರಹ್ಮಪುತ್ರ’ ನೌಕಾಪಡೆಯ ಯುದ್ಧನೌಕೆಗೆ ಬೆಂಕಿ, ನಾವಿಕ ನಾಪತ್ತೆ |INS Brahmaputra
BREAKING : ‘OCA ಮುಖ್ಯಸ್ಥ’ರಾಗಿ ‘ರಣಧೀರ್ ಸಿಂಗ್’ ಆಯ್ಕೆ, ಮೊದಲ ಭಾರತೀಯ ಹೆಗ್ಗಳಿಕೆ |Randhir Singh