ಬೆಂಗಳೂರು: ನಗರದಲ್ಲಿ ಕಾರು ಚಾಲನಾ ತರಬೇತಿದಾರರೊಬ್ಬರು ಯುವತಿಯೊಂದಿಗೆ ವಿಕೃತಿ ಮೆರೆದಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದಂತ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಆ ಡ್ರೈವಿಂಗ್ ಸ್ಕೂಲ್ ಲೈಸೆನ್ಸ್, ಚಾಲಕನ ಲೈಸೆನ್ಸ್ ರದ್ದು ಮಾಡಲು ಆದೇಶಿಸಿದ್ದಾರೆ.
ಬೆಂಗಳೂರು ಬಸವೇಶ್ವರನಗರದ ಮಾರುತಿ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ಅಣ್ಣಪ್ಪ ಎಂಬಾತನು ಕಾರು ಚಾಲನೆ ಕಲಿಯಲು ಬಂದ ಯುವತಿಯನ್ನು ಜೂನ್-7 ರಂದು ಬೆಳಗ್ಗೆ 06.00 ಗಂಟೆಗೆ ಬಸವೇಶ್ವರನಗರ ನ್ಯಾಷನಲ್ ಶಾಲೆ ಮೆಲ್ಸೇತುವೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಪಕ್ಷದ ಅಸನದಲ್ಲಿ ಕುಳಿತಿದ್ದ ಅಣ್ಣಪ್ಪ ಅಸಭ್ಯ ವರ್ತನೆ ಆರಂಭಿಸಿ, ಕಾರು ಚಾಲನೆ ತರಬೇತಿ ನೆಪದಲ್ಲಿ ಅನುಚಿತವಾಗಿ ವರ್ತಿಸಿ ಮುಜಗರ ಉಂಟು ಮಾಡಿರುವುದರ ಬಗ್ಗೆ ಕಾನೂನು ಕ್ರಮಕ್ಕೆ ಯುವತಿಯು ದೂರು ಸಲ್ಲಿಸಿರುವುದಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿರುತ್ತದೆ.
ಈ ವಿಷಯವನ್ನು ತೀರಾ ಗಂಭಿರವಾಗಿ ಪರಿಗಣಿಸಿರುವ ಮಾನ್ಯ ಸಾರಿಗೆ ಸಚಿವರು ಬಸವೇಶ್ವರ ನಗರದ ಮಾರುತಿ ಡೈವಿಂಗ್ ಸ್ಕೂಲ್ ನ ಪರವಾನಗಿಯನ್ನು ಕೂಡಲೇ ರದ್ದುಪಡಿಸಿ, ಚಾಲಕ ಅಣ್ಣಪ್ಪರವರ ಚಾಲನಾ ಪರವಾನಗಿಯನ್ನು ಸಹ ರದ್ದುಪಡಿಸುವಂತೆ ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಎಲ್ಲಾ ಡ್ರೈವಿಂಗ್ ಟ್ರೈನಿಂಗ್ ಸೆಂಟರ್ ಗಳಿಗೆ ಸೂಕ್ತ ನಿರ್ದೇಶನ ನೀಡಲು ಆಯುಕ್ತರು ಸಾರಿಗೆ ಇಲಾಖೆರವರಿಗೆ ಆದೇಶಿರುತ್ತಾರೆ.
ನಾನು ಎನ್ನುವುದು ಅಹಂಕಾರ, ನಾವು ಎನ್ನುವುದು ಸಂಸ್ಕಾರ: ಡಿಕೆಶಿ ಕುಟುಕಿದ ಕೇಂದ್ರ ಸಚಿವ HDK