ಮೈಸೂರು: ಮುಡಾ ಹಗರಣದ ಅಕ್ರಮದ ಬೆನ್ನಲ್ಲೇ ಸಿಎಂ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿಗೆ ಸೇರಿದ ಜಮೀನು ನಮ್ಮದು. ಮೋಸದಿಂದ ಜಮೀನನ್ನು ತಮ್ಮ ಚಿಕ್ಕಪ್ಪ ಮಾರಾಟ ಮಾಡಿದ್ದಾರೆ ಅಂತ ಮೂಲ ಜಮೀನಿನ ಮಾಲೀಕರಿಂದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಇಂದು ಮೈಸೂರಿನ ಜಿಲ್ಲಾಧಿಕಾರಿಯವರ ಕಚೇರಿಗೆ ಭೇಟಿ ನೀಡಿದಂತ ಮೂಲ ಮಾಲೀಕರಾದ ಜವರಯ್ಯ ಅವರ ಕುಟುಂಬಸ್ಥರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿರವರಿಗೆ ಸೇರಿದ ಎನ್ನಲಾದ ದೇವನೂರು ಜಮೀನು ತಮ್ಮದು. ನಮ್ಮ ಚಿಕ್ಕಪ್ಪ ಮೋಸದಿಂದ ಸಿಎಂ ಸಿದ್ಧರಾಮಯ್ಯ ಅವರ ಪತ್ನಿಗೆ ಮಾರಾಟ ಮಾಡಿದ್ದಾರೆ ಅಂತ ದೂರು ನೀಡಿದ್ದಾರೆ.
ಇನ್ನೂ ಮೂಲ ಮಾಲೀಕರಾದ ಜವರ ರವರ ಕುಟುಂಬಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅವರ ಕುಟುಂಬಸ್ಥರಿಗೆ ಆಗಿರು ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸುವಂತೆ ಮಾಜಿ ಸಚಿವರ ಎನ್. ಮಹೇಶ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಶ್ರೀವತ್ಸ ಮುಂತಾದವರು ಉಪಸ್ಥಿತರಿದ್ದರು.
GOOD NEWS: ‘LKG, UKG ಶಾಲೆ’ ಆರಂಭಿಸಲು ‘250 ಅಂಗನವಾಡಿ’ ಆಯ್ಕೆ: ಜು.22ರಿಂದ ವಿದ್ಯುಕ್ತ ಚಾಲನೆ
Viral Video : 32 ಹಲ್ಲುಗಳೊಂದಿಗೆ ಜನಿಸಿದ ಮಗು ; ಕಿಲಕಿಲ ನಗುತ್ತಿರುವ ಕಂದನ ವಿಡಿಯೋ ವೈರಲ್