ರಬಕವಿ-ಬನಹಟ್ಟಿ: 12 ಕಾಲ್ಬೆರಳುಗಳು ಮತ್ತು 13 ಕೈ ಬೆರಳುಗಳ ನವಜಾತ ಶಿಶುವೊಂದು ಜನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಸನ್‌ಶೈನ್ ಮಲ್ಪಿಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ನಡೆದಿದೆ.
ಮಗುವಿಗೆ ಬಲಗೈಗೆ 6, ಎಡಗೈಗೆ 7 ಮತ್ತು ಪ್ರತಿ ಕಾಲಿನಲ್ಲಿ 6 ಬೆರಳುಗಳನ್ನು ನೋಡಿ ವೈದ್ಯರು ಹಾಗೂ ಕುಟುಂಬ ವರ್ಗ ಅಚ್ಚರಿಯಾಗಿದೆ. ಮಗುವಿಗೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕ್ರೋಮೋಸೋಮ್ ಗಳಿಂದ ಇಂತಹ ಮಗು ಹುಟ್ಟುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈ ನಡುವೆ ನನ್ನ ಪತ್ನಿ ಪ್ರತಿ ವಾರ ಬೀಳಗಿ ತಾಲೂಕಿನ ಕುಂದರಗಿಯ ಭುವನೇಶ್ವರಿ ದೇವಿಗೆ ತೆರಳಿ ಮಕ್ಕಳಾಗುವಂತೆ ಬೇಡಿಕೊಂಡಿದ್ದಳು. ದೇವಿಯ ಕೃಪಾಶೀರ್ವಾದದಿಂದ ನಮಗೆ ಗಂಡು ಮಗು ಜನಿಸಿದೆ ಎಂದು ತಂದೆ ಗುರಪ್ಪ ಕೊಣ್ಣೂರ ಸಂತಸ ವ್ಯಕ್ತಪಡಿಸಿದ್ದಾರೆ.