ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಈ ಹೊತ್ತಿನಲ್ಲೇ ಕರೆಂಟ್ ಲೈನ್ ಕಟ್ ಆಗೋದು ಸೇರಿದಂತೆ ವಿವಿಧ ಸಮಸ್ಯೆಗಳಾಗುತ್ತಿವೆ. ಈ ಸಂದರ್ಭದಲ್ಲಿ ಲೈನ್ ಮನ್ ಗಳು ತಪ್ಪದೇ ಈ ಕೆಳಕಂಡ ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿದೆ.
ಈ ಸಂಬಂಧ ಮಾಹಿತಿ ಹಂಚಿಕೊಂಡಿರುವಂತ ವಾರ್ತಾ ಇಲಾಖೆಯು, ವಿದ್ಯುತ್ ಕೆಲಸದ ವೇಳೆ ಲೈನ್ ಮನ್ ಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಿ. ಮುಂದಾಗಲಿರುವಂತ ಸಮಸ್ಯೆ, ಜೀವ ಹಾನಿಯನ್ನು ತಪ್ಪಿಸುವಂತೆ ತಿಳಿಸಿದೆ.
ಈ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ
- ತಪ್ಪದೇ ಉತ್ತಮ ಗುಣಮಟ್ಟದ ಬೂಟ್ ಹಾಗೂ ಗ್ಲೌಸ್ ಗಳನ್ನು ಧರಿಸುವುದು
- ತೆರೆದ ವಿದ್ಯುತ್ ತಂತಿಗಳಿಂದ ದೂರವಿರುವುದು
- ಕೆಲಸದ ವೇಳೆ ಯಾವುದೇ ರೀತಿಯ ಲೋಹದ ವಸ್ತುಗಳನ್ನು ಇಟ್ಟುಕೊಳ್ಳಬೇಡಿ
- ಪರಿಣಿತರಿಂದ ಮಾತ್ರವೇ ವಿದ್ಯುತ್ ಕೆಲಸವನ್ನು ಮಾಡಿಸುವುದು
- ಗುಡುಗು, ಸಿಡಿಲಿನ ವೇಳೆ ವಿದ್ಯುತ್ ಕೆಲಸವನ್ನು ಮಾಡಡಿರುವುದು
- ಅಪಘಾತ ಸಂಭವಿಸಿದ್ದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ತಿಳಿದಿರಬೇಕು.
ವಿದ್ಯುತ್ ಕೆಲಸದ ವೇಳೆ ಲೈನ್‌ಮನ್‌ಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು. ಗುಡುಗು, ಸಿಡಿಲಿನ ವೇಳೆ ವಿದ್ಯುತ್ ಕೆಲಸಗಳನ್ನು ಮಾಡುವಾಗ ಜಾಗ್ರತೆ ವಹಿಸಿ.#lineman #BESCOM@CMofKarnataka@siddaramaiah@WorkersBoard@NammaBESCOM pic.twitter.com/EiJAJ66MR2
— DIPR Karnataka (@KarnatakaVarthe) July 18, 2024
ಆರ್ಯ ವೈಶ್ಯ ಸಮುದಾಯದವರ ಗಮನಕ್ಕೆ: ಈ ಯೋಜನೆಗಳಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ