ಬೆಂಗಳೂರು: ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಬಂಧನದಲ್ಲಿರುವಂತ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಮತ್ತೆ ಐದು ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ.
ಈ ಸಂಬಂಧ ಇಂದು ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಶಾಸಕ ಬಿ.ನಾಗೇಂದ್ರ ನೀಡುವಂತೆ ಇಡಿ ಅಧಿಕಾರಿಗಳು ಕೋರಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದಂತ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಮತ್ತೆ 5 ದಿನಗಳ ಕಾಲ ಇಡಿ ವಶಕ್ಕೆ ನೀಡಿ ಆದೇಶಿಸಿದೆ. ಈ ಮೂಲಕ ಶಾಸಕ ಬಿ.ನಾಗೇಂದ್ರ ಅವರು ಮತ್ತೆ ಐದು ದಿನಗಳ ಕಾಲ ಇಡಿ ವಶದಲ್ಲಿ ತನಿಖೆಗೆ ಒಳಗಾಲಿದ್ದಾರೆ.
‘ಸ್ವ-ಉದ್ಯೋಗಾಕಾಂಕ್ಷಿ’ಗಳೇ ಗಮನಿಸಿ: ‘CCTV ಕ್ಯಾಮೆರಾ’ ಅಳವಡಿಕೆ, ದುರಸ್ಥಿ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ
ಸಿಎಂ ಸಿದ್ದರಾಮಯ್ಯ ‘ಬಿಸ್ಕೆಟ್’ ಹಾಕಿ ದಲಿತ ನಾಯಕರನ್ನು ಖರೀದಿಸಿದ್ದಾರೆ : ಮಾಜಿ ಸಂಸದ ಮುನಿಸ್ವಾಮಿ ಕಿಡಿ