ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಭಿಮಾನಿಗಳು ಕರ್ನಾಟಕ ಸರ್ಕಾರದ ವಿವಾದಾತ್ಮಕ ಮೀಸಲಾತಿ ಮಸೂದೆಯನ್ನು ಪ್ರಶ್ನಿಸುತ್ತಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇಕಡಾ 100 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು.
ಆದಾಗ್ಯೂ, ವಿವಾದದ ನಂತರ, ಸರ್ಕಾರವು ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಮಸೂದೆಯನ್ನು ಸದ್ಯ ತಡೆ ಹಿಡಿದ್ದು, ಸದ್ಯಕ್ಕೆ ಮಸೂದೆ ಬಗ್ಗೆ ಚರ್ಚೆ ಮಾಡಬೇಕು ಅಂತ ತಿಳಿಸಿದೆ. ಮತ್ತೊಂದೆಡೆ, ಈ ಮಸೂದೆಯ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯ ಬೆಂಬಲಿಗರಲ್ಲಿ ಕೋಲಾಹಲವಿತ್ತು. ಈ ಹೊಸ ಕಾನೂನು ವ್ಯಾಪಾರ ಸಮುದಾಯಕ್ಕೆ ಉತ್ತಮವಾಗಿಲ್ಲ. ಈ ಮಸೂದೆಯು ತಮ್ಮ ನೆಚ್ಚಿನ ತಂಡದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಆರ್ಸಿಬಿ ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ.
100% reservation applied to RCB also😭😭😭#Karnataka #Bangalore #kanadigas pic.twitter.com/bOmbeXsSl1
— Ashish Paingankar 𝕏 (@_paingankar_) July 17, 2024