ನವದೆಹಲಿ: ಜುಲೈ 15 ರಂದು ಒಮಾನ್ ಕರಾವಳಿಯಲ್ಲಿ ಮುಳುಗಿದ ಕೊಮೊರೊಸ್ ಧ್ವಜದ ತೈಲ ಟ್ಯಾಂಕರ್ನಲ್ಲಿದ್ದ 8 ಭಾರತೀಯರು ಮತ್ತು 1 ಶ್ರೀಲಂಕಾ ಸೇರಿದಂತೆ 9 ನಾವಿಕರನ್ನ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್ಎಸ್ ತೇಜ್ ರಕ್ಷಿಸಿದೆ. ಹಡಗಿನಲ್ಲಿ ಒಟ್ಟು 13 ಭಾರತೀಯರಿದ್ದು, ಭಾರತೀಯ ನೌಕಾಪಡೆಯ ಸ್ವತ್ತುಗಳು ಮತ್ತು ಒಮಾನ್ ಏಜೆನ್ಸಿಗಳು ಇನ್ನೂ ಈ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನ ನಡೆಸುತ್ತಿವೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಭಾರತೀಯ ನೌಕಾಪಡೆಯು ತನ್ನ ಕಡಲ ಕಣ್ಗಾವಲು ವಿಮಾನ ಪಿ -8 ಐ ಜೊತೆಗೆ ಒಮಾನ್ ಹಡಗುಗಳು ಮತ್ತು ಸಿಬ್ಬಂದಿಯನ್ನ ನಿಯೋಜಿಸಿದೆ.
ಅಂದ್ಹಾಗೆ, ಹಡಗು ಮುಳುಗಿದ ಒಂದು ದಿನದ ನಂತರ ಮಂಗಳವಾರ ಈ ಘಟನೆ ವರದಿಯಾಗಿದೆ. ‘ಪ್ರೆಸ್ಟೀಜ್ ಫಾಲ್ಕನ್’ ಎಂದು ಹೆಸರಿಸಲಾಗಿರುವ ಈ ಹಡಗು ಒಮಾನ್’ನ ಕೈಗಾರಿಕಾ ಬಂದರು ಡುಕ್ಮ್ ಬಳಿ ನೀರಿನಲ್ಲಿ ಮುಳುಗಿ ತಲೆಕೆಳಗಾಗಿದೆ. ಹಡಗು ಸ್ಥಿರವಾಗಿದೆಯೇ ಅಥವಾ ಯಾವುದೇ ತೈಲ ಸೋರಿಕೆಯಾಗಿದೆಯೇ ಎಂದು ಅಧಿಕಾರಿಗಳು ದೃಢಪಡಿಸಿಲ್ಲ.
Indian Navy warship INS Teg has rescued 9 sailors including 8 Indians and 1 Sri Lankan who were on board the Comoros-flagged oil tanker that had capsized on July 15 off the Oman coast. The vessel had a total of 13 Indians onboard. Indian Navy assets and Omani agencies are still… pic.twitter.com/K1hwhsyBMj
— ANI (@ANI) July 17, 2024
2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದು ಪ್ರಧಾನಿ ಮೋದಿ ಬಯಸಿದ್ದಾರೆ : ನೀತಿ ಆಯೋಗದ ಉಪಾಧ್ಯಕ್ಷ
Child Vaccination : ಭಾರತದಲ್ಲಿ ಮಕ್ಕಳಿಗೆ ಉಚಿತ ಲಸಿಕೆಯೂ ಸಿಗುತ್ತಿಲ್ಲ : ‘WHO’ ಶಾಕಿಂಗ್ ವರದಿ
BREAKING: ಭಾರೀ ಮಳೆ ಹಿನ್ನಲೆ: ನಾಳೆ ‘ಸೊರಬ’ ತಾಲ್ಲೂಕಿನ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಣೆ | School Holiday