ಬೆಂಗಳೂರು: ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವಂತ ಸಂಚಾರ ದಟ್ಟನೆ ಕಡಿಮೆಗೊಳಿಸೋದಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಹತ್ವದ ಕ್ರಮ ವಹಿಸಿದ್ದರು. ಇದರ ಭಾಗವಾಗಿ ಇಂದು 2 ಲೆವೆಲ್ ಫ್ಲೈ ಓವರ್ ಉದ್ಘಾಟನೆಗೊಳ್ಳಲಿದೆ. ಆ ಬಗ್ಗೆ ಬಿಬಿಎಂಪಿಯ ನಿವೃತ್ತ ಮುಖ್ಯ ಅಭಿಯಂತರ ಕೆ.ಟಿ ನಾಗರಾಜ್ ಮಾತನಾಡಿದ್ದು, ಏನು ಮಾಹಿತಿ ಹಂಚಿಕೊಂಡಿದ್ದಾರೆ ಅಂತ ಮುಂದೆ ಓದಿ.
ಈ ಬಗ್ಗೆ ಮಾತನಾಡಿರುವಂತ ಅವರು, ಬೆಂಗಳೂರಿನ ಮಾರೇನಹಳ್ಳಿಯಿಂದ ಸಿಲ್ಕ್ ಬೋರ್ಡ್ ವರೆಗೂ ತೀವ್ರ ಸಂಚಾರ ದಟ್ಟಣೆಗೆ ಪರಿಹಾರ ಹುಡುಕಲು ಸತತ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಇವತ್ತು 2 ಲೆವೆಲ್ ಫ್ಲೈ ಓವರ್ ಪ್ರಾಯೋಗಿಕ ಸಂಚಾರಕ್ಕೆ ಮುಕ್ತಗೊಳ್ಳುತ್ತಿದ್ದು, ಒಂದು ರಸ್ತೆ ಮೆಟ್ರೋ ಕಾರ್ಯಾಚರಣೆಗೆ ಮತ್ತೊಂದು ರಸ್ತೆ ಇತರೆ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ ಅಂತ ತಿಳಿಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ರಿಂಗ್ ರೋಡ್ ಮತ್ತು ಸಿಲ್ಕ್ ಬೋರ್ಡ್ ಕಡೆ ಪರಿವೀಕ್ಷಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಯಾವ ರೀತಿ ಜನಸಂದಣಿಯನ್ನು ಕಡಿಮೆ ಮಾಡಬೇಕು ಎಂದು ಸಮಾಲೋಚನೆ ನಡೆಸುತ್ತಿದ್ಧಾಗ ಗಮನಕ್ಕೆ ಬಂದ ಯೋಜನೆ 2 ಲೇಯರ್ ಫ್ಲೈ ಓವರ್ ಅದಾಗಲೇ ಗಡ್ಕರಿರವರು ಕೇಂದ್ರ ಸಚಿವರ ನಾಗಪುರ ಕ್ಷೇತ್ರದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದ್ದರು.
ಇದನ್ನು ಮನಗಂಡ ಸಚಿವರು ಕೂಡಲೇ ಮೆಟ್ರೋ ಎಂಡಿಯಾಗಿದ್ದ ಪ್ರದೀಪ್ ಸಿಂಗ್ ಕರೋಲ ಅವರೊಂದಿಗೆ ಮಾತನಾಡಿ, ಒಂದು ಕಡೆ ಮೆಟ್ರೋ ಕಾರ್ಯಾಚರಣೆ ಇನ್ನೊಂದೆಡೆ ವಾಹನಗಳ ಕಾರ್ಯಚರಣೆಗೆ ಅನುವಾಗುವಂತೆ, ಮಲ್ಟಿಲೆವೆಲ್ ಫ್ಲೈ ಓವರ್ ಮಾಡೋಣ, ಇದರಿಂದ land acquisition ಕೂಡ ಕಡಿಮೆ ಆಗುತ್ತದೆ ಅದಕ್ಕೆ ತಗಲುವ ವೆಚ್ಚ ಕೂಡ ಗಣನೀಯವಾಗಿ ಇಳಿಕೆಯಾಗುತ್ತದೆ ಎಂದು ತಿಳಿಸಿದರು.
ಕೂಡಲೇ ಕರೋಲ ರವರು ಇನ್ನು ಮೆಟ್ರೋ ಕಾಮಗಾರಿ design ಹಂತದಲ್ಲಿಯೇ ಇರುವುದರಿಂದ ಇದನ್ನು ನಾವು ಮಾಡಬಹುದು ಎಂದು ಸಕಾರಾತ್ಮಕವಾಗಿ ತಿಳಿಸಿದರು. ಕೂಡಲೇ ಮಾನ್ಯ ಸಚಿವರು ನಗರೋತ್ತಾನ ಯೋಜನೆಯಡಿ ರೂ. 300 ಕೋಟಿ ಮೀಸಲಿರಿಸಿ, ಆರ್.ವಿ ರಸ್ತೆ, ಬೊಮ್ಮಸಂದ್ರ ಮಾರ್ಗದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ವರೆಗೆ 3.3 ಕಿ.ಮೀ ದೂರದ ಫ್ಲೈ ಓವರ್ ಯೋಜನೆಗೆ ಅನುಮತಿ ಎಂದು ಕೆ.ಟಿ.ನಾಗರಾಜ್ ಅಂದಿನ ಮುಖ್ಯ ಅಭಿಯಂತರರು, ಬಿ.ಬಿ.ಎಂ.ಪಿ ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳ ತಾಂತ್ರಿಕ ಸಲಹೆಗಾರರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ಧಾರೆ.
ಅವರು ಮುಂದುವರೆಸಿ ಮಾತನಾಡುತ್ತಾ ರಾಮಲಿಂಗಾ ರೆಡ್ಡಿ ಅವರು ಕಡಿಮೆ ವೆಚ್ಚದಲ್ಲಿ ಜನರ ಆಸ್ತಿ ಪಾಸ್ತಿಗಳಿಗೂ ಹೆಚ್ಚು ಹಾನಿಯಾಗದಂತೆ, ಜನದಟ್ಟಣೆ ಕಡಿಮೆಯಾಗುವಂತೆ ಮಾಡುವ ಈ ಯೋಜನೆಯು ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಸುಗಮ ಸಂಚಾರಕ್ಕೆ ಅನುವಾಗಲಿದೆ ಎಂದು ತಿಳಿಸಿದ್ದಾರೆ.
ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರಾಯೋಗಿಕ ಸಂಚಾರಕ್ಕೆ ಈ ಡಬ್ಬಲ್ ಡೆಕ್ಕರ್ ರಸ್ತೆಯನ್ನು ಮುಕ್ತಗೊಳಿಸಲಾಗಿದೆ. ಈ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆಗೆ ಕೊಂಚ ರಿಲೀಫ್ ಸಿಕ್ಕಂತೆ ಆಗಲಿದೆ.
BIG NEWS : 2026 ನೇ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ʻCBSEʼ ಬೋರ್ಡ್ ಪರೀಕ್ಷೆ ಜಾರಿ : ʻNCFSEʼ ಶಿಫಾರಸು