ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತಾಮ್ರದ ವಸ್ತುಗಳನ್ನು ನಮ್ಮ ದಿನನಿತ್ಯದ ಉಪಯೋಗಕ್ಕೆ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಹಿಂದಿನಿಂದಲೂ ಆಯುರ್ವೇದವು ಹೇಳಿದೆ. ಅದರಲ್ಲೂ ಹಿಂದೆ ಕೆಲವು ತಾಮ್ರದ ಕೈಬಳೆ ಹಾಕಿಕೊಂಡಿರುವುದನ್ನು ನಾವು ಕಾಣುತ್ತೇವೆ. ಆದರೆ ಇದು ಯಾಕೆ ಎನ್ನುವ ಪ್ರಶ್ನೆಯು ಬರದೇ ಇರದು. ತಾಮ್ರದ ಕೈಬಳೆ ಧರಿಸುವುದರಿಂದ ಹಲವಾರು ಲಾಭಗಳು ಇದೆ. ತಾಮ್ರದಲ್ಲಿ ಚಿಕಿತ್ಸಕ ಗುಣ ಇದೆ ಎನ್ನುವುದು ನಮಗೆ ಈಗಾಗಲೇ ತಿಳಿದಿರುವ ವಿಚಾರ.
ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದರಿಂದಾಗಿ ತಾಮ್ರವು ತುಂಬಾ ಪ್ರಬಲ ಲೋಹವೆಂದು ಪರಿಗಣಿಸಲಾಗಿದೆ. ದಿನನಿತ್ಯದ ಜೀವನದಲ್ಲಿ ಚಿಕಿತ್ಸೆ ಮತ್ತು ಆರೋಗ್ಯಕ್ಕೆ ತಾಮ್ರದ ಬಳಕೆ ಬಗ್ಗೆ ಆಧುನಿಕ ವೈದ್ಯಕೀಯ ವಿಜ್ಞಾನವು ದೃಢಪಡಿಸಿದೆ. ನಾವು ಸೇವಿಸುವಂತಹ ಆಹಾರದಿಂದ ನಮಗೆ ಹೆಚ್ಚಿನ ತಾಮ್ರದ ಅಂಶವು ಸಿಗುವುದು. ಹಸಿರೆಲೆ ತರಕಾರಿಗಳು, ಇಡೀ ಧಾನ್ಯಗಳು, ಬೀನ್ಸ್ ಮತ್ತು ಬಟಾಟೆಯಲ್ಲಿ ಉನ್ನತ ಮಟ್ಟದ ತಾಮ್ರದ ಅಂಶವಿದೆ. ಗೋಡಂಬಿ, ಒಣ ಹಣ್ಣುಗಳು, ಕರಿಮೆಣಸು ಮತ್ತು ಯೀಸ್ಟ್ ನಲ್ಲಿ ಇದು ಅತ್ಯಧಿಕ ಪ್ರಮಾಣದಲ್ಲಿದೆ.
ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ‘ನೀರು ಕುಡಿದರೆ’ ಆರೋಗ್ಯವಾಗಿರುವಿರಿ:–ತಾಮ್ರವು ದೇಹದ ಆರೋಗ್ಯವನ್ನು ಕಾಪಾಡುವುದು ಮತ್ತು ದೇಹದಲ್ಲಿ ಧನಾತ್ಮಕ ಶಕ್ತಿ ಉಂಟು ಮಾಡಲು ಅದು ನೆರವಾಗುವುದು ಎಂದು ಸಾಬೀತಾಗಿದೆ. ಇದು ಮಾನಸಿಕ ಆರೋಗ್ಯವನ್ನು ಸುಧಾರಣೆ ಮಾಡುವುದು. ಶಾಂತಿಯುತ ವಾತಾವರಣಕ್ಕಾಗಿ ಮನೆಯಲ್ಲಿ ಹೆಚ್ಚಾಗಿ ತಾಮ್ರದ ಮೂರ್ತಿಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಇಡುವರು. ತಾಮ್ರದ ಬಾಟಲಿಗಳು, ಲೋಟಗಳು ಮತ್ತು ಪಾತ್ರೆಗಳನ್ನು ನೋಡಿರಬಹುದು. ಅಷ್ಟು ಮಾತ್ರವಲ್ಲದೆ ನಾಲಗೆ ಸ್ವಚ್ಛ ಮಾಡುವಂತಹ ಸಾಧನವು ತಾಮ್ರದಿಂದ ಮಾಡಲ್ಪಟ್ಟಿ ರುವುದು ಸಿಗುವುದು. ಕೆಲವು ಮಂದಿ ತಾಮ್ರದ ಉಂಗುರು ಅಥವಾ ಕೈಬಳೆ ಹಾಕಿರುವುದನ್ನು ನೋಡಿರುತ್ತೇವೆ. ಇದು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು ಮತ್ತು ನಕಾರಾತ್ಮಕತೆ ದೂರ ಮಾಡುವುದು.
ತಾಮ್ರದ ಉಂಗುರು ಧರಿಸಿದರೆ ಸಿಗುವ ಆರೋಗ್ಯ ಲಾಭಗಳು:–ತಾಮ್ರದ ಉಂಗುರ ಧರಿಸಿದರೆ ದೇಹದಲ್ಲಿ ಇರುವಂತಹ ತಾಮ್ರದ ಕೊರತೆ ಸಮಸ್ಯೆ ನಿವಾರನೆ ಮಾಡಬಹುದು. ಇದರಿಂದ ನಿದ್ರೆಯ ಸಮಸ್ಯೆ, ದೃಷ್ಟಿ ಸುಧಾರಣೆ ಮತ್ತು ಚಯಾಪಚಯವನ್ನು ಇದು ವೃದ್ಧಿಸುವುದು. ಇದು ವ್ಯಕ್ತಿಯ ಆಧ್ಯಾತ್ಮಿಕ ಶಕ್ತಿ ಹೆಚ್ಚಿಸುವುದು. ಪರಿಶುದ್ಧ ತಾಮ್ರದ ಉಂಗುರ / ಕೈಬಳೆಯ ಲಾಭಗಳನ್ನು ಇಲ್ಲಿ ನೀಡಲಾಗಿದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿರೋಧಕ ವ್ಯವಸ್ಥೆ ಆರೋಗ್ಯವಾಗಿಡುವುದು;–ತಾಮ್ರವು ಮಾನಸಿಕ ಸಮತೋಲನವು ಸುಧಾರಣೆ ಮಾಡುವುದು ಮತ್ತು ದೇಹವನ್ನು ಬಲ ಗೊಳಿಸುವುದು. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ಹಿಮೋಗ್ಲೋಬಿನ್ ಜಮೆಯಾಗಲು ನೆರವಾಗುವುದು ಮತ್ತು ದೇಹದಲ್ಲಿ ರಕ್ತಸಂಚಾರ ಸರಾಗವಾಗಿ ಆಗುವಂತೆ ಮಾಡುವುದು. ದೇಹಕ್ಕೆ ಬೇರೆ ಯಾವುದೇ ರೀತಿಯ ಲೋಹದಿಂದ ಆಗುವಂತಹ ಹಾನಿಯನ್ನು ತಡೆಯಲು ಇದು ತಡೆಯುವುದು.
ರಕ್ತದೊತ್ತಡ ಕಾಪಾಡುವುದು:–ತಾಮ್ರದ ಉಂಗುರವು ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಮತ್ತು ರಕ್ತದೊತ್ತಡ ಕಡಿಮೆ ಆಗುವ ಸಮಸ್ಯೆಯು ನಿವಾರಣೆ ಆಗುವುದು. ತಾಮ್ರದ ಉಂಗುರು ಧರಿಸಿರುವ ವ್ಯಕ್ತಿಯು ಬೇರೆಲ್ಲಾ ವ್ಯಕ್ತಿಗಿಂತಲೂ ಉತ್ತಮ ರಕ್ತದೊತ್ತಡ ಹೊಂದಿರುವರು.
ಹೃದಯರಕ್ತನಾಳದ ಆರೋಗ್ಯ ಕಾಪಾಡುವುದು:–ತಾಮ್ರವು ದೇಹದಲ್ಲಿ ಕಾಲಜನ್, ಎಲಾಸ್ಟಿನ್ ಮತ್ತು ನಾರುಗಳನ್ನು ಕ್ರಾಸ್ ಲಿಂಕ್ ಮಾಡಲು ನೆರವಾಗುವುದು. ಈ ಎಲಾಸ್ಟಿನ್ ನಾರಿನಾಂಶವು ಮಹಾಪಧಮನಿ ಮತ್ತು ಅದರ ಸುತ್ತಮುತ್ತಲು ಇರುವುದು. ತಾಮ್ರವು ಈ ನಾರುಗಳನ್ನು ಬಲಪಡಿಸುವುದು ಮತ್ತು ಯಾವುದೇ ಸಮಸ್ಯೆಗಳನ್ನು ತಡೆಯುವುದು.
ಮೂಳೆಗಳನ್ನು ಬಲಪಡಿಸುವುದು:-ಮೂಳೆ ಮತ್ತು ಗಂಟು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ತಾಮ್ರದ ನೋವು ನಿವಾರಕ ಕೈಬಳೆ ತುಂಬಾ ನೆರವಾಗುವುದು. ತಾಮ್ರದ ಉಂಗುರ ಮತ್ತು ಕೈಬಳೆಯು ಗಂಟು ನೋವು ಅಥವಾ ಸಂಧಿವಾತ ನಿವಾರಣೆ ಮಾಡುವುದು. ಇದು ಮೂಳೆಗಳಿಗೆ ಶಮನ ನೀಡುವುದು ಮತ್ತು ಬಲಗೊಳಿಸುವುದು. ಮೂಳೆಗೆ ಸಂಬಂಧಿಸಿದ ಅನಾರೋಗ್ಯವನ್ನು ಇದು ದೂರ ಮಾಡುವುದು. ಗಂಟುಗಳಿಗೆ ಇದು ಆರಾಮ ನೀಡುವುದು, ಅಸ್ಥಿರಂಧ್ರತೆ ಮತ್ತು ಸಂಧಿವಾತದ ನೋವು ದೂರ ಮಾಡುವುದು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559