ನವದೆಹಲಿ:ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಮಂಗಳವಾರ ನೀತಿ ಆಯೋಗವನ್ನು ಪುನರ್ ರಚಿಸಿದ್ದು, ನಾಲ್ವರು ಪೂರ್ಣಾವಧಿ ಸದಸ್ಯರು ಮತ್ತು ಬಿಜೆಪಿ ಮಿತ್ರಪಕ್ಷಗಳು ಸೇರಿದಂತೆ 15 ಕೇಂದ್ರ ಸಚಿವರನ್ನು ಪದನಿಮಿತ್ತ ಸದಸ್ಯರು ಅಥವಾ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿ ಮುಂದುವರಿದಿದ್ದಾರೆ ಮತ್ತು ಅರ್ಥಶಾಸ್ತ್ರಜ್ಞ ಸುಮನ್ ಕೆ ಬೆರಿ ಅವರು ನೀತಿ ಆಯೋಗದ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಅಧಿಕೃತ ಅಧಿಸೂಚನೆ ತಿಳಿಸಿದೆ.
ವಿಜ್ಞಾನಿ ವಿ.ಕೆ.ಸಾರಸ್ವತ್, ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್, ಮಕ್ಕಳ ತಜ್ಞ ವಿ.ಕೆ.ಪಾಲ್ ಮತ್ತು ಸ್ಥೂಲ ಅರ್ಥಶಾಸ್ತ್ರಜ್ಞ ಅರವಿಂದ್ ವಿರ್ಮಾನಿ ಅವರು ಸರ್ಕಾರದ ಚಿಂತಕರ ಚಾವಡಿಯ ಪೂರ್ಣಾವಧಿ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಹವಾಮಾನ ನಿರ್ವಹಣೆಗೆ ನೀತಿ ಆಯೋಗದಂತಹ ಶಾಶ್ವತ ಆಯೋಗ ಬೇಕು: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ
ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ (ರಕ್ಷಣಾ), ಅಮಿತ್ ಶಾ (ಗೃಹ), ಶಿವರಾಜ್ ಸಿಂಗ್ ಚೌಹಾಣ್ (ಕೃಷಿ) ಮತ್ತು ನಿರ್ಮಲಾ ಸೀತಾರಾಮನ್ (ಹಣಕಾಸು) ಅವರು ಪದನಿಮಿತ್ತ ಸದಸ್ಯರಾಗಿರುತ್ತಾರೆ.
ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ (ನೀತಿ ಆಯೋಗ) ಪರಿಷ್ಕೃತ ರಚನೆಗೆ ಪ್ರಧಾನಿ ಅನುಮೋದನೆ ನೀಡಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ (ರಸ್ತೆ ಸಾರಿಗೆ ಮತ್ತು ಹೆದ್ದಾರಿ), ಜಗತ್ ಪ್ರಕಾಶ್ ನಡ್ಡಾ (ಆರೋಗ್ಯ), ಎಚ್.ಡಿ.ಕುಮಾರಸ್ವಾಮಿ (ಭಾರಿ ಕೈಗಾರಿಕೆ ಮತ್ತು ಉಕ್ಕು), ಜಿತನ್ ರಾಮ್ ಮಾಂಝಿ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಸಾರಿಗೆ) ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ