ಶಿವಮೊಗ್ಗ : ಶಿವಮೊಗ್ಗ ನಗರ ಮೆಸ್ಕಾಂ ಉಪವಿಭಾಗ-2, ಮಂಡ್ಲಿಯ ಘಟಕ-6ರ ವ್ಯಾಪ್ತಿಯಲ್ಲಿ ಹೊಸ 11 ಕೆವಿ ಮಾರ್ಗದ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ.18ರಂದು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಅಂತ ಮೆಸ್ಕಾಂ ತಿಳಿಸಿದೆ.
ಜುಲೈ.18ರಂದು ಈ ಪ್ರದೇಶಗಳಲ್ಲಿ ಪವರ್ ಕಟ್
ಸೀಗೆಹಟ್ಟಿ, ರವಿವರ್ಮಬೀದಿ, ಬಿ.ಬಿ.ರಸ್ತೆ, ಓ.ಟಿ.ರಸ್ತೆ, ಪಂಚವಟಿ ಕಾಲೋನಿ, ಅಮೀರ್ ಅಹ್ಮದ್ ಸರ್ಕಲ್, ಕೃಷಿ ಕಚೇರಿ, ಮಾಕಮ್ಮಬೀದಿ, ಕೆರೆದುರ್ಗಮ್ಮನಕೇರಿ, ಪುಟ್ಟನಂಜಪ್ಪ ಕೇರಿ, ಆಜಾದ್ ನಗರ, ಕಲಾರ್ ಪೇಟೆ, ಸಿದ್ದಯ್ಯ ರಸ್ತ, ಇಮಾಮ್ ಬಡಾ, ಮುರಾದ್‍ನಗರ, ಕ್ರೌನ್ ಪ್ಯಾಲೇಸ್ ಶಾದಿಮಹಲ್, ತಾಹಾ ಶಾದಿಮಹಲ್, ಮಂಡಕ್ಕಿಭಟ್ಟಿ ಏರಿಯಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜು.18 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಜರ್ಮನಿಯಲ್ಲಿ ನರ್ಸಿಂಗ್ ಕೆಲಸಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನ
ಜರ್ಮನಿ ಸರ್ಕಾರದಿಂದ ಮಾನ್ಯತೆ ಪಡೆದಿರುವ ಮೇ|| ಟ್ಯಾಲೆಂಟ್ ಆರಂಜ್ ಸಂಸ್ಥೆಯು ಭಾರತ ದೇಶದಿಂದ ನರ್ಸ್ ಆಗಿ ಕೆಲಸ ನಿರ್ವಹಿಸಲು ಬಿಎಸ್ಸಿ/ಜಿಎನ್‍ಎಂ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಜರ್ಮನಿಯಲ್ಲಿ ಉದ್ಯೋಗವನ್ನು ಕಲ್ಪಿಸಲು ಮುಂದೆ ಬಂದಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಮೇ|| ಟ್ಯಾಲೆಂಟ್ ಆರಂಜ್ ಸಂಸ್ಥೆಯು ಕರ್ನಾಟಕ ರಾಜ್ಯದ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸಂಪರ್ಕಿಸಿರುವ ಹಿನ್ನೆಲೆಯಲ್ಲಿ ಸೂಕ್ತ ವಿದ್ಯಾರ್ಹತೆ ಹೊಂದಿರುವ ನರ್ಸಿಂಗ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕೇರಳ ರಾಜ್ಯದ ತಿರುವನಂತಪುರದ ತರಬೇತಿ ಕೇಂದ್ರದಲ್ಲಿ 8 ತಿಂಗಳ ಕಾಲ ಜರ್ಮನ್ ಭಾಷೆಯ ಬಗ್ಗೆ ತರಬೇತಿ ನೀಡಿಲಿದೆ. ಈ ಸಂದರ್ಭದಲ್ಲಿ ಉಚಿತ ಊಟ, ವಸತಿ ಸೌಲಭ್ಯ ನೀಡುವುದರ ಜೊತೆ ಪ್ರಯಾಣ ವ್ಯವಸ್ಥೆಯನ್ನು ಒದಗಿಸುತ್ತಿದೆ.
ಅಭ್ಯರ್ಥಿಗಳು ಕಡ್ಡಾಯವಾಗಿ ಭಾರತೀಯ ನರ್ಸಿಂಗ್ ಲೈಸೆನ್ಸ್ ಹೊಂದಿದ್ದು, ಹೊಸಬರು/ ಅನುಭವವುಳ್ಳ 38 ವರ್ಷದೊಳಗಿನ ಮಹಿಳೆಯರು/ಪುರುಷರು ಅರ್ಜಿ ಸಲ್ಲಿಸಬಹುದಾಗಿದೆ. ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ಯುವ ಅವಕಾಶವಿರುವುದಿಲ್ಲ.
ಆಸಕ್ತರು ಕಾರ್ಮಿಕ ಅಧಿಕಾರಿಗಳ ಕಚೇರಿ, ಉಪವಿಭಾಗ ಶಿವಮೊಗ್ಗ, 2ನೇ ಮಹಡಿ, ವಾಣಿಜ್ಯ ಸಂಕೀರ್ಣ, ಸೂಡಾ ಕಾಂಪ್ಲೇಕ್ಸ್, ಪೊಲೀಸ್ ಚೌಕಿ, ವಿನೋಬನಗರ, ಶಿವಮೊಗ್ಗ ಇಲ್ಲಿ ನೋಂದಾಯಿಸಿಕೊಳ್ಳುವಂತೆ ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.:08182-248940 ನ್ನು ಸಂಪರ್ಕಿಸುವುದು.
ಜು.27ರಂದು ‘ಬೆಂಗಳೂರು ನಿರ್ವಹಣೆ’ಗೆ ಇಲಾಖೆಗಳ ನಡುವೆ ಸಮನ್ವಯತೆ ಕುರಿತು ‘ಜನಪ್ರತಿನಿಧಿ’ಗಳ ಸಭೆ: ಡಿ.ಕೆ.ಶಿವಕುಮಾರ್
BIG UPDATE : ಕಾರವಾರದಲ್ಲಿ ಗುಡ್ಡ ಕುಸಿತದಿಂದ 9 ಜನರ ದುರ್ಮರಣ : 7 ಜನರ ಸಾವು, ಇಬ್ಬರು ನಾಪತ್ತೆ!