ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಕೇದಾರನಾಥ ದೇವಾಲಯವನ್ನ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ತೀವ್ರವಾಗಿ ವಿರೋಧಿಸಿದ್ದಾರೆ. ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ, ಮುಖೇಶ್ ಅಂಬಾನಿ ಅವರ ಕಿರಿಯ ಮಗ ಅನಂತ್ ಅಂಬಾನಿ ಮತ್ತು ಅವರ ಪತ್ನಿ ರಾಧಿಕಾ ಮರ್ಚೆಂಟ್ ಅವರ ‘ಶುಭ ಆಶೀರ್ವಾದ್’ ಸಮಾರಂಭದಲ್ಲಿ ಭಾಗವಹಿಸಲು ಜ್ಯೋತಿರ್ಮಠದ ಶಂಕರಾಚಾರ್ಯರು ಮಹಾರಾಷ್ಟ್ರದ ರಾಜಧಾನಿ ಮುಂಬೈಗೆ ಆಗಮಿಸಿದ್ದರು.
ಮುಂಬೈನಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಶಿವಸೇನೆ (UBT) ನಾಯಕ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ಗೆ ಭೇಟಿ ನೀಡಿದರು. ಅಂಬಾನಿ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನ ಸ್ವಾಮೀಜಿ ಆಶೀರ್ವದಿಸಿದರು.
“ಹೌದು, ಪ್ರಧಾನಿ ಮೋದಿ ನನ್ನ ಬಳಿಗೆ ಬಂದು ಪ್ರಾಣಾಯಾಮ ಮಾಡಿದರು. ನಮ್ಮ ಬಳಿಗೆ ಯಾರೇ ಬಂದರೂ ನಾವು ಆಶೀರ್ವದಿಸುತ್ತೇವೆ ಎಂಬುದು ನಮ್ಮ ನಿಯಮ. ನರೇಂದ್ರ ಮೋದಿ ಅವರು ನಮ್ಮ ಶತ್ರುಗಳಲ್ಲ. ನಾವು ಅವರ ಹಿತೈಷಿಗಳು ಮತ್ತು ಯಾವಾಗಲೂ ಅವರ ಕಲ್ಯಾಣಕ್ಕಾಗಿ ಮಾತನಾಡುತ್ತೇವೆ. ಅವರು ತಪ್ಪು ಮಾಡಿದರೆ, ನಾವು ಅದನ್ನು ಅವರಿಗೂ ತೋರಿಸುತ್ತೇವೆ” ಸ್ವಾಮೀಜಿ ಮಾಹಿತಿ ನೀಡಿದರು.
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : ಕರ್ತವ್ಯದ ವೇಳೆ ನೀವು ಪಾಲಿಸಬೇಕಾದ ʻಸೇವಾʼ ನಿಯಮಗಳ ಕುರಿತು ಇಲ್ಲಿದೆ ಮಾಹಿತಿ
BIG NEWS: ‘ವಿಧಾನಪರಿಷತ್ತಿ’ನಲ್ಲಿ ಪ್ರತಿಧ್ವನಿಸಿದ ‘ನಿತ್ಯ ಸುಮಂಗಲಿ’ ಪದ: ‘ಮಹಿಳಾ ಸದಸ್ಯ’ರು ಆಕ್ಷೇಪ
BREAKING : ಯುವರಾಜ್ ಸಿಂಗ್, ರೈನಾ ಸೇರಿ ಮೂವರು ಮಾಜಿ ಕ್ರಿಕೆಟಿಗರ ವಿರುದ್ಧ ʻFIRʼ ದಾಖಲು!