ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶೂ ಕಳ್ಳತನವಾಗಿದ್ದು, ಎಷ್ಟೇ ಹುಡುಕಿದರೂ ಸಿಗದಿದ್ದಾಗ ಬೇರೆ ಶೂ ಹಾಕಿಕೊಂಡು ಹೋಗಿದ್ದಾರೆ.
ಬೆಂಗಳೂರಿನ ವೈಟ್ ಟಾಪಿಂಗ್ ಕಾಮಗಾರಿಗೆ ಪೂಜೆಗೆ ಆಗಮಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಪೂಜೆಗೆ ಶೂ ಬಿಚ್ಚಿ ಪೂಜೆ ಮಾಡಿದ್ದಾರೆ. ಬಳಿಕ ಶೂ ಹಾಕಿಕೊಳ್ಳಲು ಹೋದಾಗ ಕಳ್ಳತನವಾಗಿದೆ.
ಸದಾಶಿವನಗರದ ಭಾಷ್ಯಂ ಸರ್ಕಲ್ ನಲಿ ಈ ಘಟನೆ ನಡೆದಿದ್ದು, ಎಷ್ಟೇ ಹುಡುಕಿದ್ರೂ ಶೂ ಸಿಗದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಬೇರೆ ಶೂ ಹಾಕಿಕೊಂಡು ಪ್ರಯಾಣ ಬೆಳೆಸಿದ್ದಾರೆ.