ಬೆಂಗಳೂರು: ಬಿಜೆಪಿ ಪಕ್ಷದ ವಿರೋಧಿ ಎಂಬ ಘೋಷಣೆಗೂ ಡೋಂಟ್ ಕೇರ್ ಎನ್ನುವಂತೆ ವೇದಿಕೆಯ ಕಾರ್ಯಕ್ರಮದಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬಿಜೆಪಿ ಶಾಸಕ ವಿ.ಮುನಿರತ್ನ ಅವರು ಹಾಡಿ ಹೊಗಳಿದಂತ ಘಟನೆ ನಡೆದಿದೆ.
ಬೆಂಗಳೂರಿನ ಸುಮ್ಮನಹಳ್ಳಿ ಬಳಿಯಲ್ಲಿ ಇಂದು ಬಾಬು ಜಗನ್ ಜೀವನ್ ರಾಮ್ ಭವನ, ಸಂಶೋಧನಾ ಸಂಸ್ಥೆಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಂತ ಬಿಜೆಪಿ ಶಾಸಕ ವಿ ಮುನಿರತ್ನ ಅವರು, ಈಗ ಬೇರೆ ಪಕ್ಷದಲ್ಲಿ ಇದ್ದೇನೆ. ನಾನು ಸಿದ್ಧರಾಮಯ್ಯ ವಿರುದ್ಧ ಮಾತನಾಡೋದಿಲ್ಲ ಎಂದರು.
ನಮ್ಮ ಹೋರಾಟ ಏನಿದ್ದರೂ ಬೇರೆಯೇ ಆಗಿದೆ. ಮುಖ್ಯಮಂತ್ರಿ ಕುರ್ಚಿ ಅಲ್ಲಾಡಿಸೋ ಕೆಲಸ ಮಾಡ್ತಿಲ್ಲ. ವಿರೋಧ ಪಕ್ಷದ ಓರ್ವ ಶಾಸಕನಾಗಿ ಹೇಳುತ್ತೇನೆ. ಬೆಂಗಳೂರು, ಕ್ಷೇತ್ರ ಅಭಿವೃದ್ಧಿಗೆ ಮುಂದಾಗಬೇಕು ಎಂಬುದಾಗಿ ವೇದಿಕೆಯಲ್ಲೇ ಸಿಎಂ ಸಿದ್ಧರಾಮಯ್ಯಗೆ ಮನವಿ ಮಾಡಿದರು.
ಸಿಎಂ ಸಿದ್ಧರಾಮಯ್ಯ ಅವರನ್ನು ಬಿಜೆಪಿ ಶಾಸಕ ವಿ.ಮುನಿರತ್ನ ವೇದಿಕೆಯಲ್ಲೇ ಹಾಡಿ ಹೊಗಳಿದ್ದರಿಂತ ಕೋಪಗೊಂಡ ಓರ್ವ ಕಾರ್ಯಕರ್ತನೊಬ್ಬ ಬಿಜೆಪಿ ಪಕ್ಷ ವಿರೋಧಿ ಮುನಿರತ್ನ ಎಂಬುದಾಗಿ ಘೋಷಣೆ ಕೂಗಿದರು. ಮುನಿರತ್ನ ಭಾಷಣದ ನಡುವೆಯೇ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಜೊತೆಗೆ ಮುನಿರತ್ನ ಭಾಷಣಕ್ಕೂ ಅಡ್ಡಿಪಡಿಸಿದರು. ಆದರೇ ಇದಕ್ಕೆ ಡೋಂಟ್ ಕೇರ್ ಎನ್ನುವಂತೆ ತಮ್ಮ ಮಾತು ಮುಂದುವರೆಸಿದಂತ ಮುನಿರತ್ನ, ಸಿಎಂ ಸಿದ್ಧರಾಮಯ್ಯ ಅವರನ್ನು ಹಾಡಿ ಹೊಗಳಿದರು.
ಈ ವೇದಿಕೆ ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಸಿದ್ಧರಾಮಯ್ಯ ಹಾಗೂ ಬಿಜೆಪಿ ಶಾಸಕ ವಿ.ಮುನಿರತ್ನ ಕೆಲ ಕಾಲ ಪ್ರತ್ಯೇಕವಾಗಿ ಚರ್ಚೆ ಕೂಡ ನಡೆಸಿದರು. ಆ ಬಳಿಕ ಬಿಜೆಪಿಯ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ವಿ.ಮುನಿರತ್ನ ಅವರನ್ನು ಸಿದ್ಧರಾಮಯ್ಯ ಬೆನ್ನು ತಟ್ಟಿ ಕಳುಹಿಸಿದ್ದು ಕಂಡು ಬಂದಿತು.
ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿದೆ, ಗ್ಯಾರಂಟಿಯಿಂದ ಜನರಿಗೆ ಆರ್ಥಿಕ ಬಲ: MLC ದಿನೇಶ್ ಗೂಳಿಗೌಡ
BIG NEWS: ‘ರಾಜ್ಯ ಸರ್ಕಾರ’ದಿಂದ ಮಹಾ ಎಡವಟ್ಟು: ‘ಸತ್ತ ಅಧಿಕಾರಿ’ಯನ್ನೇ ವರ್ಗಾವಣೆ