ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ LKG, UKG ಹಾಗೂ 1ನೇ ತರಗತಿ ಪ್ರವೇಶಾತಿಗೆ ಶಿಕ್ಷಣ ಇಲಾಖೆಯಿಂದ ಗರಿಷ್ಟ ವಯೋಮಿತಿ ನಿಗದಿಪಡಿಸಿ ಆದೇಶಿಸಿದೆ. ಅಲ್ಲದೇ 8 ವರ್ಷ ಮೀರಿದ ವಯೋಮಾನದ ಮಕ್ಕಳನ್ನು 1ನೇ ತರಗತಿ ಪ್ರವೇಶಕ್ಕೆ ನಿರ್ಬಂಧ ಕೂಡ ವಿಧಿಸಿ ಆದೇಶಿಸಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ದಿನಾಂಕ 26-07-2022ರಂದು ಹೊರಡಿಸಿದಂತ ಆದೇಶದಲ್ಲಿ ಜೂನ್ 1ನೇ ತಾರೀಕಿಗೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರುವ ಮಗುವನ್ನು 1ನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿ ಪಡಿಸಲಾಗಿತ್ತು. ಅಲ್ಲದೇ 25-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಆದೇಶ ಮಾಡಲಾಗಿತ್ತು ಎಂದಿದ್ದಾರೆ.
ಈಗಾಗಲೇ LKG, UKG ಮತ್ತು 1ನೇ ತರಗತಿ ಪ್ರವೇಶಕ್ಕೆ ದಾಖಲಾತಿಗೆ ಕನಿಷ್ಠ ಅರ್ಹ ವಯೋಮಾನವನ್ನು ಪರಿಷ್ಕರಿಸಿ ನಿಗಧಿ ಪಡಿಸಲಾಗಿದೆ. ಆದ್ರೇ ಗರಿಷ್ಠ ವಯೋಮಾನ ಪರಿಷ್ಕರಿಸಿಲ್ಲ. ಈ ಗರಿಷ್ಠ ವಯೋಮಾನವನ್ನು ಈ ಕೆಳಗಿನಂತೆ ನಿಗದಿ ಪಡಿಸಿದೆ ಅಂತ ಹೇಳಿದ್ದಾರೆ.
ಹೀಗಿದೆ LKG, UKG ಹಾಗೂ 1ನೇ ತರಗತಿ ಪ್ರವೇಶಾತಿಗೆ ಗರಿಷ್ಠ ವಯೋಮಾನ
- LKG – ಗರಿಷ್ಠ ವಯೋಮಿತಿ 6 ವರ್ಷಗಳು
- UKG – ಗರಿಷ್ಠ 7 ವರ್ಷಗಳು.
- 1ನೇ ತರಗತಿ – ಗರಿಷ್ಠ 8 ವರ್ಷಗಳು.
BIG NEWS: ‘ರಾಜ್ಯ ಸರ್ಕಾರ’ದಿಂದ ಮಹಾ ಎಡವಟ್ಟು: ‘ಸತ್ತ ಅಧಿಕಾರಿ’ಯನ್ನೇ ವರ್ಗಾವಣೆ