ಕಲಬುರ್ಗಿ: ರಾಜ್ಯ ಸರ್ಕಾರದಿಂದ ಆರು ತಿಂಗಳ ಹಿಂದೆ ಮೃತಪಟ್ಟಂತ ಅಧಿಕಾರಿಯನ್ನೇ ವರ್ಗಾವಣೆ ಮಾಡಿ ಮಹಾ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ ಆರು ತಿಂಗಳ ಹಿಂದೆ ಕಲಬುರ್ಗಿ ಜಿಲ್ಲೆಯ ಸೇಡಂ ಪಟ್ಟಣದ ನಗರಾಭಿವೃದ್ಧಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿದ್ದಂತ ಅಶೋಕ ಪುಟಪಾಕ ಅವರು ಮೃತಪಟ್ಟಿದ್ದರು. ಇಂತಹ ಅಧಿಕಾರಿಗಳನ್ನು ಜುಲೈ.9ರಂದು ಸೇಡಂ ಪುರಸಭೆಯಿಂದ ಕೊಡಗು ಜಿಲ್ಲೆಯ ಮಡಿಕೇರಿ ನಗಸಭೆಯ ಕಿರಿಯ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಿದೆ.
ಅಂದಹಾಗೇ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಂತ ಚಿತ್ತಾಪುರ ತಾಲೂಕಿನ ದಿಗ್ಗಾಂವ ಗ್ರಾಮದ ಅಶೋಕ ಭೀಮರಾಯ ಪುಟಪಾಕ(54) ಅವರು ಜನವರಿ.12, 2024ರಂದು ಮೃತಪಟ್ಟಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಚಿತ್ತಾಪುರ, ವಾಡಿ, ಸೇಡಂ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದರು. ಹೀಗಿದ್ದೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ವಿಧಾನಸಭಾ ಕ್ಷೇತ್ರದಲ್ಲೇ ಮೃತಪಟ್ಟ ಅಧಿಕಾರಿಯನ್ನು ವರ್ಗಾವಣೆ ಆದೇಶ ಮಾಡಿ ಮಹಾ ಎಡವಟ್ಟು ಮಾಡಿದೆ.
ಅಲ್ಲ ಮೃತ ನೌಕರರನ್ನೇ ವರ್ಗಾವಣೆ ಮಾಡಿ ಆದೇಶಿಸಿದೆಯಲ್ಲ ನಗರಾಭಿವೃದ್ಧಿ ಇಲಾಖೆಯವರಿಗೆ ಆ ಮಾಹಿತಿ ಇರಲಿವ್ವ? ಅಥವಾ ಮೃತ ಪಡುವ ಮುನ್ನವೇ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ರಾ ಅನ್ನೋದು ತಿಳಿದು ಬರಬೇಕಿದೆ.
BREAKING : ಬೆಳಗಾವಿಯಲ್ಲಿ ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಪತ್ನಿಯ ಹತ್ಯೆ ಮಾಡಿ ಪಾಪಿ ಗಂಡ ಎಸ್ಕೇಪ್!