ಬೆಂಗಳೂರು: 2024-25ನೇ ಸಾಲಿನಲ್ಲಿ ಪ್ರತಿಭಾವಂತ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.10,000 ದಂತೆ ಪ್ರೋತ್ಸಾಹಿತ ಕ್ರೀಢಾ ವಿದ್ಯಾರ್ಥಿ ವೇತನ ನೀಡಲು ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು,ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮಾಧ್ಯಮಿಕ/ಪ್ರೌಢಶಾಲಾ ವಿದ್ಯಾರ್ಥಿ ಕ್ರೀಡಾಪಟು (6 ರಿಂದ 10ನೇ ತರಗತಿ) ಗಳಿಗೆ ವಾರ್ಷಿಕ ರೂ. 10,000/- ನೀಡುವ ಸಂಬಂಧ 2024-25ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಅರ್ಹ ಕ್ರೀಡಾಪಟುಗಳಿಂದ ಉಲ್ಲೇಖಿತ ಸುತ್ತೋಲೆಯಲ್ಲಿ ಕಛೇರಿಯ ಅಧಿಕೃತ ಜಾಲತಾಣ: https://sevasindhuservices.karnataka.gov.in ಮೂಲಕ ಆನ್‌ಲೈನ್‌ನಲ್ಲಿ ದಿನಾಂಕ:01-06-2024 ರಿಂದ 30-06-2024ರವರೆಗೆ ರವರೆಗೆ ಸಲ್ಲಸಲು ತಿಳಿಸಲಾಗಿತ್ತು.
ಸದರಿ ದಿನಾಂಕವನ್ನು 20-07-2024ರವರೆಗೆ ಮುಂದುವರೆಸಿ ಆದೇಶಿಸಿದ. ಈ ಬಗ್ಗ ಜಿಲ್ಲೆಗಳಲ್ಲಿ ಅಗತ್ಯ ಕ್ರಮ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಅರ್ಜಿ ಸಲ್ಲಿಸಲು ವ್ಯಾಪಕ ಪ್ರಚಾರ ನೀಡಲು ಸೂಚಿಸಿದ್ದಾರೆ.