ನವದೆಹಲಿ: ದಿನಾಂಕ: 11.07.2024 ರಂದು CWRCಯ 99ನೇ ಸಭೆಯು ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ನಡೆಯಿತು. ಈ ಸಭೆಯಲ್ಲಿನ ಇಂದಿನ ಪ್ರಮುಖ ಹೈಲೈಟ್ಸ್ ಮುಂದೆ ಓದಿ.
ಕರ್ನಾಟಕವು CWRC ಮುಂದೆ ಈ ಕೆಳಕಂಡ ಅಂಶಗಳನ್ನು ಸಲ್ಲಿಸಿತು:
ದಿನಾಂಕ 01.06.2024 ರಿಂದ 09.07.2024 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವು 41.651 ಟಿ.ಎಂ.ಸಿ ಇರುತ್ತದೆ. ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು 28.71% ಇರುತ್ತದೆ.
ಕರ್ನಾಟಕದ ನಾಲ್ಕು ಜಲಾಶಯಗಳಲ್ಲಿನ ಸಂಗ್ರಹಣೆಯು 58.668 ಟಿಎಂಸಿ ಇದ್ದು, ಮೆಟ್ಟೂರಿನಿಂದ 4.905 ಟಿಎಂಸಿ ಮತ್ತು ಭವಾನಿಯಿಂದ 0.618 ಟಿಎಂಸಿ (ಒಟ್ಟು 5.542 ಟಿಎಂಸಿ) ನದಿಗೆ ಬಿಡುಗಡೆ ಮಾಡಿರುವುದಲ್ಲದೆ ತಮಿಳುನಾಡಿನ ಮೂರು ಜಲಾಶಯಗಳಲ್ಲಿ 24.705 ಟಿಎಂಸಿ ಇರುತ್ತದೆ.
ನೀರು ಬಿಡುಗಡೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಸಮಿತಿಯು ಜುಲೈ 25, 2024 ರವರೆಗೆ ಕಾಯುವುದು ಸೂಕ್ತವೆಂದು ಕರ್ನಾಟಕವು ಅಭಿಪ್ರಾಯಿಸಿತು. ತದನಂತರ, ಕರ್ನಾಟಕದ ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರಲು ಪ್ರಾಧಿಕಾರವು ವಸ್ತಸ್ಥಿತಿಯನ್ನು ಸಮಂಜಸವಾಗಿ ಪರಿಗಣಿಸಬಹುದು.
ತಮಿಳುನಾಡು ಈ ಕೆಳಕಂಡಂತೆ ಬೇಡಿಕೆಯನ್ನು ಸಲ್ಲಿಸಿತು:
ಹಿಂದಿನ ಜಲ ವರ್ಷದಲ್ಲಿ, ಫೆಬ್ರವರಿ 2024 ರಿಂದ ಮೇ 2024 ರ ಅವಧಿಗೆ ಕರ್ನಾಟಕವು ಪರಿಸರದ ಹರಿವನ್ನು ಬಿಡುಗಡೆ ಮಾಡಿರುವುದಿಲ್ಲ.
ಪ್ರಸಕ್ತ ಜಲ ವರ್ಷದಲ್ಲಿ ಪರಿಸ್ಥಿತಿ ಸಾಮಾನ್ಯವಾಗಿದ್ದು (Normal) ಮತ್ತು ಕರ್ನಾಟಕವು ಸಾಮಾನ್ಯ ಒಳಹರಿವನ್ನು ಪಡೆದಿದೆ. ಆದ್ದರಿಂದ ಗೌರವಾನ್ವಿತ ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDT ಆದೇಶದಂತೆ ಕರ್ನಾಟಕವು ಬಿಳಿಗುಂಡ್ಲುವಿನಲ್ಲಿ ನಿಗದಿತ ಹರಿವನ್ನು ಖಚಿತಪಡಿಸಿಕೊಳ್ಳಬೇಕು.
ವಿವರವಾದ ಚರ್ಚೆಗಳ ನಂತರ, CWRC ಈ ಕೆಳಕಂಡಂತೆ ನಿರ್ಧರಿಸಿತು:
ದಿನಾಂಕ: 12.07.2024 ರಿಂದ 31.07.2024 ರ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ ಸಂಚಿತ ನೀರಿನ ಹರಿವನ್ನು ದಿನಕ್ಕೆ 1 TMC (ಸರಾಸರಿ 11,500 ಕ್ಯೂಸೆಕ್ಗಳ ಹರಿವು) ಇರುವಂತೆ ಸದಸ್ಯ ರಾಜ್ಯವಾದ ಕರ್ನಾಟಕವು ತನ್ನ ಜಲಾಶಯಗಳಿಂದ ನೀರಿನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಬೇಕು.
BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಹಾಡಹಗಲೇ ತಹಶೀಲ್ದಾರ್ ಕಚೇರಿಯಲ್ಲೇ ‘ಶಿರಸ್ತೆದಾರ್’ಗೆ ಚಾಕು ಇರಿತ
BREAKING : ವಾಲ್ಮೀಕಿ ಹಗರಣ : ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಮಾಜಿ ಪಿಎ ಪಂಪಣ್ಣ ಇಡಿ ವಶಕ್ಕೆ