ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರನ್ನಾಗಿ ಆಯೇಷಾ ಖಾನಂ ಅವರನ್ನು ನೇಮಕ ಮಾಡಿ ಆದೇಶಿಸಿದೆ. ಅಲ್ಲದೇ ಸದಸ್ಯರು ಪತ್ರಕರ್ತರನ್ನು ನೇಮಿಸಲಾಗಿದೆ.
ಇಂದು ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಂ ಜೆಸಿಂತ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧೀನದಲ್ಲಿರುವ, ಕರ್ನಾಟಕ ಮಾಧ್ಯಮ ಅಕಾಡೆಮಿಯ ಬೈಲಾದ ಕಂಡಿಕೆ 5(1) ಮತ್ತು 5(5)ರಲ್ಲಿ ಪುದತ್ತವಾಗಿರುವ ಅಧಿಕಾರದನ್ವಯ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಂದಹಾಗೇ ಅಧ್ಯಕ್ಷರನ್ನಾಗಿ ಆಯೇಷಾ ಖಾನಂ ಅವರನ್ನು ನೇಮಕ ಮಾಡಿದ್ರೇ, ಸದಸ್ಯರನ್ನಾಗಿ ಎಂ.ಎನ್ ಅಹೋಬಳಪತಿ, ಕೆ.ವೆಂಕಟೇಶ್ ಹಾಗೂ ಕೆ ನಿಂಗಜ್ಜ ಅವರನ್ನು ನೇಮಕ ಮಾಡಲಾಗಿದೆ.
ಮೈಸೂರಿನ ‘ಚಾಮುಂಡಿ ಬೆಟ್ಟ’ಕ್ಕೆ ತೆರಳೋರ ಗಮನಕ್ಕೆ: KSRTCಯಿಂದ ‘ವಿಶೇಷ ಬಸ್’ ವ್ಯವಸ್ಥೆ