ನವದೆಹಲಿ : ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿದ್ದು, ಭಾರತ ತಂಡದ ಮುಖ್ಯ ತರಬೇತುದಾರರಾಗಲಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ಜಯ್ ಶಾ ಅವರು ಗಂಭೀರ್ ಅವರನ್ನ ಮುಖ್ಯ ಕೋಚ್ ಆಗಿ ಘೋಷಿಸಿದ್ದಾರೆ.
BCCI Secretary Jay Shah tweets, "It is with immense pleasure that I welcome Gautam Gambhir as the new Head Coach of the Indian Cricket Team. Modern-day cricket has evolved rapidly, and Gautam has witnessed this changing landscape up close. Having endured the grind and excelled in… https://t.co/uSA8flmA2M pic.twitter.com/b6cnsIjBwR
— ANI (@ANI) July 9, 2024
2024ರ ಟಿ20 ವಿಶ್ವಕಪ್ ಗೆದ್ದ ಬಳಿಕ ದ್ರಾವಿಡ್ ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ವಿದಾಯ ಹೇಳುವುದಾಗಿ ಘೋಷಿಸಿದ್ದರು. ಟಿ20 ವಿಶ್ವಕಪ್ಗೆ ಸಿದ್ಧತೆಯಲ್ಲಿಯೂ ಐಸಿಸಿ ಪಂದ್ಯಾವಳಿಯ ನಂತ್ರ ವಿಸ್ತರಣೆಗೆ ಸಹಿ ಹಾಕುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದರು. ಹೀಗಾಗಿ ಸಧ್ಯ ಗೌತಮ್ ಗಂಭೀರ್ ಅವ್ರನ್ನ ಆಯ್ಕೆ ಮಾಡಲಾಗಿದೆ.
ಭಾರತದ ಮಾಜಿ ಆರಂಭಿಕ ಆಟಗಾರರಾದ ಗಂಭೀರ್ ಮತ್ತು ಡಬ್ಲ್ಯುವಿ ರಾಮನ್ ಅವರನ್ನ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (CAC) ಕಳೆದ ತಿಂಗಳು ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಹುದ್ದೆಗೆ ಸಂದರ್ಶನ ನಡೆಸಿತ್ತು. ಅಂದ್ಹಾಗೆ, ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ 2024ರ ಆವೃತ್ತಿಯಲ್ಲಿ ಕೋಲ್ಕತ್ತಾದ ಮೂರನೇ ಪ್ರಶಸ್ತಿ ವಿಜಯದ ಮಾಸ್ಟರ್ ಮೈಂಡ್ ಕೆಕೆಆರ್ ಮಾರ್ಗದರ್ಶಕರಾಗಿದ್ದರು.
BIG NEWS: ‘ಅನರ್ಹರ ರೇಷನ್ ಕಾರ್ಡ್’ಗಳನ್ನು ರದ್ದು, ಅರ್ಹರಿಗೆ ಮಾತ್ರ ಸೌಲಭ್ಯ: ಸಿಎಂ ಸಿದ್ಧರಾಮಯ್ಯ