ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 185 ಮಂದಿಗೆ ಡೆಂಗ್ಯೂ ಫೀವರ್ ಪಾಸಿಟಿವ್ ( Dengue Fever Positive ) ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕಳೆದ 24 ಗಂಟೆಯಲ್ಲಿ 948 ಮಂದಿಯನ್ನು ಡೆಂಗ್ಯೂ ಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು. ಅವರಲ್ಲಿ 185 ಮಂದಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢರಟ್ಟಿರುವುದಾಗಿ ತಿಳಿಸಿದೆ.
0-1ವರ್ಷದೊಳಗಿನ ಒಬ್ಬರಿಗೆ, 1 ವರ್ಷದಿಂದ 18 ವರ್ಷದೊಳಗಿ 81 ಜನರಿಗೆ, 18ಕ್ಕೂ ಹೆಚ್ಚು ವಯಸ್ಸಿನ 103 ಜನರು ಸೇರಿದಂತೆ 185 ಜನರಿಗೆ ಕಳೆದ 24 ಗಂಟೆಯಲ್ಲಿ ಡೆಂಗ್ಯೂ ದೃಢಪಟ್ಟಿದೆ ಅಂತ ಹೇಳಿದೆ.
ಅಂದಹಾಗೇ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 425 ಮಂದಿಯನ್ನು ಪರೀಕ್ಷೆ ಮಾಡಲಾಗಿದ್ದು, 91 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ಬಂದಿದೆ. ರಾಮನಗರದಲ್ಲಿ 23 ಮಂದಿಯಲ್ಲಿ 11, ಚಿಕ್ಕಬಳ್ಳಾಪುರ 28 ಜನರಲ್ಲಿ 2, ಚಿತ್ರದುರ್ಗ 95 ಮಂದಿಯಲ್ಲಿ 25 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ದೃಢಪಟ್ಟಿದೆ.
ಧಾರವಾಡದಲ್ಲಿ 30, ಯಾದಗಿರಿ ಐವರು, ಮಂಡ್ಯದಲ್ಲಿ 19, ಉಡುಪಿಯಲ್ಲಿ ಇಬ್ಬರು ಸೇರಿದಂತೆ 185 ಜನರಿಗೆ ಇಂದು ಒಂದೇ ದಿನ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಇನ್ನೂ ಈವರೆಗೆ ಬೆಂಗಳೂರು ನಗರದಲ್ಲಿ ಒಬ್ಬರು, ಶಿವಮೊಗ್ಗ ಒಬ್ಬರು, ಧಾರವಾಡ 01, ಗದಗ 01. ಮೈಸೂರು 01, ಹಾಸನ 02 ಸೇರಿದಂತೆ 7 ಜನರು ಡೆಂಗ್ಯೂವಿನಿಂದ ಸಾವನ್ನಪ್ಪಿದ್ದಾರೆ.
#Dengue Fever Media Bulletin – 09/07/2024 pic.twitter.com/f5mdxjQbMe
— K'taka Health Dept (@DHFWKA) July 9, 2024
ಬೆಂಗಳೂರಿನ ವಾಹನ ಸವಾರರ ಗಮನಕ್ಕೆ: ಈ ಮಾರ್ಗದಲ್ಲಿ ರಸ್ತೆ ಸಂಚಾರ ಬಂದ್, ಇಲ್ಲಿದೆ ಪರ್ಯಾಯ ಮಾರ್ಗ
BREAKING: ನಾಳೆ ಬೆಳಗ್ಗೆ ‘SSLC ಪರೀಕ್ಷೆ-2’ರ ಫಲಿತಾಂಶ ಪ್ರಕಟ | Karnataka SSLC Exam Results