ಬೆಂಗಳೂರು: ನಗರದಲ್ಲಿ ಕುಡಿದು ಶಾಲಾ ವಾಹನವನ್ನು ಚಾಲನೆ ಮಾಡುತ್ತಿರೋ ಚಾಲಕರ ಸಂಖ್ಯೆ ಹೆಚ್ಚಾಗಿದೆ ಎಂಬ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಜೊತೆ ಜೊತೆಗೆ ಶಾಲಾ ಮಕ್ಕಳ ಪೋಷಕರಲ್ಲಿ ಆತಂಕವನ್ನು ಹೆಚ್ಚಿಸುವಂತೆ ಮಾಡಿದೆ.
ಇಂದು ಬೆಂಗಳೂರು ಸಂಚಾರ ಪೊಲೀಸರು ಕುಡಿದು ಶಾಲಾ ವಾಹನ ಚಾಲನೆ ಮಾಡುವಂತ ಸಾವರರ ವಿರುದ್ಧ ಸಮರವನ್ನೇ ಸಾರಿದ್ದಾರೆ. ಬರೋಬ್ಬರಿ 3016 ಶಾಲಾ ವಾಹನಗಳನ್ನು ತಪಾಸಣೆ ಮಾಡಿದ್ದಾರೆ.
ಇಂದಿನ ಸಂಚಾರ ಪೊಲೀಸರ ತಪಾಸಣೆಯ ವೇಳೆಯಲ್ಲಿ ಬರೋಬ್ಬರಿ 23 ಶಾಲಾ ವಾಹನದ ಚಾಲಕರು ಕುಡಿದು ವಾಹನ ಚಾಲನೆ ಮಾಡಿದ್ದು ದೃಢಪಟ್ಟಿದೆ. ಹೀಗಾಗಿ ಅವರ ವಿರುದ್ಧ 185 ಐಎಂವಿ ಕಾಯ್ದೆಯ ಅನುಸಾರ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೇ ಚಾಲಕರ ಡಿಎಲ್ ರದ್ದುಗೊಳಿಸುವಂತೆಯೂ ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಲಾಗಿದೆ.
ಇನ್ನೂ ಬೆಂಗಳೂರಿನ ಕೆಲ ಶಾಲಾ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಷ್ ಇಲ್ಲದೇ ರಸ್ತೆಯಲ್ಲಿ ಓಡಾಡುತ್ತಿವೆ. ಫಿಟ್ನೆಸ್ ಸರ್ಟಿಫಿಕೇಟ್ ರದ್ದಾಗಿದ್ದರೂ ಅಂತಹ ಶಾಲಾ ವಾಹನ ಚಾಲನೆ ಮಾಡುತ್ತಿದ್ದಂತ 11 ವಾಹನಗಳನ್ನು ಸಂಚಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಕಳಪೆ ಬೀಜ’ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿಗಳಿಗೆ ‘ಸಿಎಂ ಸಿದ್ಧರಾಮಯ್ಯ’ ಖಡಕ್ ಸೂಚನೆ
BIG NEWS : ಅನರ್ಹ ʻBPLʼ ಕಾರ್ಡ್ ರದ್ದು : ʻCMʼ ಸಿಎಂ ಸಿದ್ದರಾಮಯ್ಯ ಆದೇಶ