ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದ್ದಂತ ಅವ್ಯವಹಾರ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಕ್ಕ ಪರಿಶೋಧಕ, ಎಂ.ಡಿ ನಡುವಿನ ಮಾತುಕತೆಯ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಏನು ಹೇಳಿದ್ದಾರೆ ಅನ್ನೋ ಬಗ್ಗೆ ಮುಂದೆ ಓದಿ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವಂತ 187 ಕೋಟಿ ಹಣ ಅಕ್ರಮ ವರ್ಗಾವಣೆ ಸಂಬಂಧ ಇಂದು ಮಾಜಿ ಸಚಿವ ಬಿ.ನಾಗೇಂದ್ರ ಎಸ್ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಇದೇ ಸಂದರ್ಭದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮ್ಯಾನೇಜಿಂಗ್ ಡೈರೆಕ್ಟರ್ ಪದ್ಮನಾಭ್ ಹಾಗೂ ಲೆಕ್ಕ ಪರಿಶೋಧಕ ಪರುಶುರಾಮ್ ನಡುವಿನ ಆಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವಂತ ಆಯಿಯೋದಲ್ಲಿ ಚಂದ್ರಶೇಖರನ್ ಡೆತ್ ನೋಟ್ ಬರೆದಿಟ್ಟು ಸಾಯುವ 2 ದಿನಗಳ ಮೊದಲು ಮಾತನಾಡಿದ್ದು ಎನ್ನಲಾಗಿದೆ. ಅದರಲ್ಲಿ ಅವರ ವಿಶ್ವಾಸ ಗಳಿಸೋದಕ್ಕೆ ಹೀಗೆ ಮಾಡಿದೆ ಅಂತ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂ.ಡಿ ಪದ್ಮನಾಭ್, ಲೆಕ್ಕ ಪರಿಶೋಧಕ ಪರುಶುರಾಮ್ ಬಳಿಯಲ್ಲಿ ಹೇಳಿರುವುದು ತಿಳಿದು ಬಂದಿದೆ.
ಹಾಗಾದ್ರೇ ಎಂ.ಡಿ ಪದ್ಮನಾಭ್ ಅವರು ನಾನು ಹೀಗೆ ಮಾಡಿದ್ದು ಅವರ ವಿಶ್ವಾಸ ಗಳಿಸೋದಕ್ಕೆ ಎಂದು ಹೇಳಿರೋದು ಯಾರ ಬಗ್ಗೆ ಎಂಬುದೇ ಈಗ ನಿಗೂಢವಾಗಿದ್ದು, ಆ ಬಗ್ಗೆ ಎಸ್ಐಟಿ ತನಿಖೆಯಿಂದ ಖಚಿತ ಮಾಹಿತಿ ಹೊರ ಬೀಳಬೇಕಿದೆ.
BIG NEWS : ಅನರ್ಹ ʻBPLʼ ಕಾರ್ಡ್ ರದ್ದು : ʻCMʼ ಸಿಎಂ ಸಿದ್ದರಾಮಯ್ಯ ಆದೇಶ
BREAKING : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ : ಸ್ಪೋಟದ ಶಬ್ದಕ್ಕೆ ಬೆಚ್ಚಿಬಿದ್ದ ಜನರು!