ಬೆಂಗಳೂರು : LKG, UKG ಮತ್ತು 1ನೇ ತರಗತಿಗೆ ಮಕ್ಕಳ ಶಾಲಾ ಪ್ರವೇಶ ದಾಖಲಾತಿಗೆ ಅರ್ಹ ಗರಿಷ್ಟ ವಯೋಮಾನವನ್ನು ಪರಿಷ್ಕರಿಸುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲೆ ಓದಲಾದ ಕ್ರಮಾಂಕ (1)ರ ಸರ್ಕಾರದ ಆದೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ-2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012ರಂತೆ ಶೈಕ್ಷಣಿಕ ವರ್ಷದ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗಧಿಪಡಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (2)ರಲ್ಲಿ ಸರ್ಕಾರದ ಆದೇಶ ಸಂಖ್ಯೆ:ಇಪಿ 260 ಪಿಜಿಸಿ 2021, ದಿನಾಂಕ:26.07.2022ರ ಆದೇಶದಲ್ಲಿ ಜೂನ್ ಒಂದನೇ ತಾರೀಖಿಗೆ ಕಡ್ಡಾಯವಾಗಿ 06 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗಧಿಪಡಿಸಲಾಗಿರುವುದನ್ನು 2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯವಾಗುವಂತೆ ತಿದ್ದುಪಡಿ ಮಾಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (3)ರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರದಲ್ಲಿ LKG, UKG ಮತ್ತು 01ನೇ ತರಗತಿ ಪ್ರವೇಶಕ್ಕೆ ಈಗಾಗಲೇ ದಾಖಲಾತಿಗೆ ಕನಿಷ್ಮ ಅರ್ಹ ವಯೋಮಾನವನ್ನು ಪರಿಷ್ಕರಿಸಿ ನಿಗಧಿಪಡಿಸಲಾಗಿದೆ. ಅದರೆ ಗರಿಷ್ಟ ವಯೋಮಾನಗಳನ್ನು ಪರಿಷ್ಕರಿಸಿರುವುದಿಲ್ಲ. ಗರಿಷ್ಠ ವಯೋಮಿತಿಯನ್ನು ಪರಿಷ್ಕರಿಸುವುದರಿಂದ ಡ್ರಾಪ್ ಔಟ್ ಮಕ್ಕಳ ಸಂಖ್ಯೆಯನ್ನು ಸಹ ತಗ್ಗಿಸಬಹುದಾಗಿರುವ ಪ್ರಯುಕ್ತ LKG, UKG ಮತ್ತು 01ನೇ ತರಗತಿಗಳಿಗೆ ಈಗಾಗಲೇ ಮಕ್ಕಳ ದಾಖಲಾತಿಗಾಗಿ ಕನಿಷ್ಠ ವಯೋಮಿತಿಯನ್ನು ಪರಿಷ್ಕರಿಸಿ ನಿಗಧಿಪಡಿಸಿರುವಂತೆ ಗರಿಷ್ಠ ವಯೋಮಾನದ ಮಾನದಂಡವನ್ನು ಸಡಿಲಿಸಿ ಪರಿಷ್ಕರಿಸುವ ಅಗತ್ಯವಿದ್ದು, ಈ ಕೆಳಕಂಡಂತೆ ಪರಿಷ್ಕರಿಸಲು ಕೋರಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, LKG, UKG ಮತ್ತು 01ನೇ ತರಗತಿ ಪ್ರವೇಶಕ್ಕೆ ಗರಿಷ್ಟ ವಯೋಮಾನಗಳನ್ನು 2023-24 ನೇ ಸಾಲಿನಲ್ಲಿ ಅನ್ವಯವಾಗುವಂತೆ ಈ ಕೆಳಕಂಡಂತೆ ನಿಗಧಿಪಡಿಸಿ ಆದೇಶಿಸಿದೆ.