2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಜೂನ್ 29 ರಂದು ಬ್ರಿಡ್ಜ್ಟೌನ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸಿತು.
ಈ ಮೂಲಕ ಟೀಂ ಇಂಡಿಯಾ 2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದರು.
ಜಯ್ ಶಾ ಭವಿಷ್ಯವಾಣಿ ನಿಜವಾಯ್ತು:
ಅಂತಿಮ ಪಂದ್ಯದ ಗೆಲುವಿನೊಂದಿಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರ ಭವಿಷ್ಯವಾಣಿ ನಿಜವಾಯಿತು. ವಾಸ್ತವವಾಗಿ, ಬಾರ್ಬಡೋಸ್ ಮೈದಾನದಲ್ಲಿ ರೋಹಿತ್ ಶರ್ಮಾ ಭಾರತದ ಧ್ವಜವನ್ನು ಹಾರಿಸುತ್ತಾರೆ ಎಂದು ಜಯ್ ಶಾ ಈಗಾಗಲೇ ಭವಿಷ್ಯ ನುಡಿದಿದ್ದರು. ನಾಯಕ ರೋಹಿತ್ ಶರ್ಮಾ ಕೂಡ ಪ್ರಶಸ್ತಿ ಗೆದ್ದ ನಂತರ ಮೈದಾನದಲ್ಲಿ ಭಾರತದ ಧ್ವಜವನ್ನು ನೆಟ್ಟರು.
ಈಗ ಜಯ್ ಶಾ ಮತ್ತೊಮ್ಮೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಮುಂದಿನ ವರ್ಷ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ ಗೆಲ್ಲಲಿದೆ ಎಂದು ಜಯ್ ಶಾ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂಬುದು ಶಾ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಚಾಂಪಿಯನ್ಸ್ ಟ್ರೋಫಿ 50 ಓವರ್ಗಳ ಸ್ವರೂಪದ ಪಂದ್ಯಾವಳಿಯಾಗಿದೆ. ರೋಹಿತ್ ಟಿ 20 ಅಂತರರಾಷ್ಟ್ರೀಯ ಪಂದ್ಯದಿಂದ ನಿವೃತ್ತರಾದರು, ಆದರೆ ಅವರು ಇನ್ನೂ ಉಳಿದ ಎರಡು ಸ್ವರೂಪಗಳಲ್ಲಿ ನಾಯಕರಾಗಿದ್ದಾರೆ.
ವಿಡಿಯೋ ಸಂದೇಶದಲ್ಲಿ ಜಯ್ ಶಾ, “ಈ ಐತಿಹಾಸಿಕ ಗೆಲುವಿಗಾಗಿ ಟೀಮ್ ಇಂಡಿಯಾಕ್ಕೆ ಅನೇಕ ಅಭಿನಂದನೆಗಳು. ಕೋಚ್ ರಾಹುಲ್ ಅವರ ಈ ಗೆಲುವಿನ ಬಗ್ಗೆ ನನಗೆ ಹೆಮ್ಮೆ ಇದೆ” ಎಂದಿದ್ದಾರೆ.
#WATCH | BCCI Secretary Jay Shah congratulates the Indian cricket team on winning the ICC T20 World Cup
He says, “…I am confident that under the captaincy of Rohit Sharma, we will win the WTC Final and the Champions Trophy…”
(Source: BCCI) pic.twitter.com/NEAvQwxz8Y
— ANI (@ANI) July 7, 2024