ಬೆಂಗಳೂರು: ರಾಜ್ಯ ಸರ್ಕಾರದಿಂದ ಈಗಾಗಲೇ ಗೋಬಿ ಮಂಚೂರಿಗೆ ಬಳಿಸುವಂತ ಬಣ್ಣ, ಆ ಬಳಿಕ ಕಬಾಬ್ ಗೆ ಬಳಸುವಂತ ಕೃತಕ ಬಣ್ಣವನ್ನು ನಿಷೇಧ ಮಾಡಲಾಗಿತ್ತು. ಈಗ ಟೀ ಪುಡಿಯಲ್ಲಿ ಕೃತಕ ಬಣ್ಣ, ರುಚಿ ಹೆಚ್ಚಿಸುವ ರಾಸಾಯನಿಕ ಬಳಕೆ ಹಿನ್ನಲೆಯಲ್ಲಿ, ಟೀ ಪುಡಿಯನ್ನೇ ಬ್ಯಾನ್ ಮಾಡಲಿದೆ ಅಂತ ತಿಳಿದು ಬಂದಿದೆ.
ಹೌದು ಟೀ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ಟೀ ಪುಡಿಯಲ್ಲಿ ಕೃತಕ ಬಣ್ಣ, ರುಚಿ ಹೆಚ್ಚಿಸುವ ರಾಸಾಯನಿಕ ಬಳಕೆ ಹಿನ್ನೆಲೆ ಕೃತಕ ಬಣ್ಣ, ರಾಸಾಯನಿಕ ಇರುವುದು ಪ್ರಾಯೋಗಿಕ ಪರೀಕ್ಷೆಯಲ್ಲಿ ದೃಢಪಟ್ಟಿದೆ.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಶೀಘ್ರವೇ ಟೀ ಪುಡಿ ಬ್ಯಾನ್‌ಗೆ ನಿರ್ಧರಿಸಿದೆ. ಈಗಾಗಲೇ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ತೀರ್ಮಾನ ಮಾಡಲಾಗಿದ್ದು, ಶೀಘ್ರವೇ ಟೀ ಪುಡಿಯನ್ನು ಬ್ಯಾನ್ ಮಾಡಿ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಸಾಧ್ಯತೆ ಇದೆ. ಆ ಬಗ್ಗೆ ಕೆಲವೇ ದಿನಗಳವರೆಗೆ ಕಾದು ನೋಡಬೇಕಿದೆ.
ಅಸ್ಸಾಂ ಪ್ರವಾಹ ಪರಿಸ್ಥಿತಿ ಗಂಭೀರ, 30 ಜಿಲ್ಲೆಗಳಲ್ಲಿ 24.50 ಲಕ್ಷ ಜನರಿಗೆ ತೊಂದರೆ
BREAKING: ರಾಜ್ಯ ಸರ್ಕಾರದಿಂದ ‘ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ’ಗಳನ್ನು ನೇಮಿಸಿ ಆದೇಶ: ಇಲ್ಲಿದೆ ಪಟ್ಟಿ