ಬೆಂಗಳೂರು: ನಾಗೇಂದ್ರರ ರೀತಿ ನಿಮ್ಮ ರಾಜೀನಾಮೆ ಯಾವಾಗ ಸಿದ್ದರಾಮಯ್ಯನವರೇ ಅಂತ ರಾಜ್ಯ ಬಿಜೆಪಿ ಘಟನ ಟ್ವಿಟ್ ಮಾಡಿ ವ್ಯಂಗ್ಯ ಮಾಡಿದೆ. ಇದೇ ವೇಳೆ ಟ್ವಿಟ್‌ನಲ್ಲಿ ಆರ್ ಅಶೋಕ್
ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾದ ₹4,000 ಕೋಟಿ ಮೌಲ್ಯದ ಮುಡಾ ಹಗರಣದಲ್ಲಿ ದಿನಕ್ಕೊಂದು ಕರ್ಮಕಾಂಡ ಬಯಲಾಗುತ್ತಿದೆ.
ಮುಖ್ಯಮಂತ್ರಿ ಅವರ ಪತ್ನಿಗೆ ಮಂಜೂರಾಗಿರುವ 35 ಕೋಟಿ ರೂಪಾಯಿ ಮೌಲ್ಯದ 14 ನಿವೇಶನಗಳಿಗೆ ಸಂಬಂಧಪಟ್ಟ ಕಡತಗಳನ್ನ ತಿರುಚುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವ ಅವರು ಕಡತಗಳನ್ನು ಬೆಂಗಳೂರಿಗೆ ತಂದಿರುವ ಗುಮಾನಿ ಇದೆ.
ಸರ್ಕಾರ ಈ ಕೂಡಲೇ ಸಂಬಂಧಪಟ್ಟ ಕಡತಗಳನ್ನ ಬಹಿರಂಗ ಮಾಡಿ ಸಾರ್ವಜನಿಕರ ಮುಂದಿಡಬೇಕು ಎಂದು ಸಿಎಂ ಅವರನ್ನ ಒತ್ತಾಯಿಸುತ್ತೇನೆ ಅಂತ ಹೇಳಿದ್ದಾರೆ.
ನಾಗೇಂದ್ರರ ರೀತಿ ನಿಮ್ಮ ರಾಜೀನಾಮೆ ಯಾವಾಗ ಸಿದ್ದರಾಮಯ್ಯನವರೇ…??#MudaScam #PickPocketSarakara pic.twitter.com/4NXuPriAIF
— BJP Karnataka (@BJP4Karnataka) July 5, 2024