ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 840 ಬಿ.ಎಸ್-6 ಡೀಸೆಲ್ ಬಸ್ಸುಗಳನ್ನು ಒಟ್ಟು ರೂ 363.82 ಕೋಟಿಗಳ ವೆಚ್ಚದಲ್ಲಿ ಖರೀದಿಸಲು ಇಂದು ನಡೆದ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದೆ. ಈ ಮೂಲಕ ಬೆಂಗಳೂರಿನ ಬಿಎಂಟಿಸಿ ಪ್ರಯಾಣಿಕರಿಗೆ ಹೊಸ ಬಸ್ಸುಗಳಲ್ಲಿ, ಹೆಚ್ಚು ಹೆಚ್ಚು ಬಸ್ ಸೇವೆ ದೊರೆಯುವಂತೆ ಆಗಲಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಒಟ್ಟು 6045 ಬಸ್ಸುಗಳನ್ನು ಆಚರಣೆ ಮಾಡುತ್ತಿದ್ದು ಪ್ರತಿದಿನ 40 ಲಕ್ಷ ಪ್ರಯಾಣೀಕರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ.
ನಗರ ಸಂಚಾರವು ಬಹಳ ದಟ್ಟಣೆಯಿಂದ ಕೂಡಿರುವುದರಿಂದ ಸಾರ್ವಜನಿಕರಿಗೆ ಸಾರಿಗೆಯು ವಿಶೇಷವಾಗಿ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಸಾರಿಗೆ ವಿಧಾನವಾಗಿದ್ದು, ವಾಹನ ಬಲವನ್ನು ಹೆಚ್ಚುಸುವುದು ಅಗತ್ಯವಿರುತ್ತದೆ. ವಾಯು ಮಾಲಿನ್ಯವನ್ನು ತಡೆಗಟ್ಟಲು ಸಹಾಯವಾಗುತ್ತದೆ. ಹಳೆ ವಾಹನಗಳ ಬದಲಾವಣೆ ಕೂಡ ಅಗತ್ಯವಾಗಿದೆ.
ಮೆ:ಅಶೋಕ್ ಲೆಲ್ಯಾಂಡ್ ನ ಒಟ್ಟು 840 ಬಸ್ಸುಗಳಿಗೆ ತಗಲುವ ವೆಚ್ಚ ರೂ. 336 ಕೋಟಿ ಯನ್ನು ಸರ್ಕಾರವು ಭರಿಸಲಿದೆ ಹಾಗೂ ರೂ.2 7.82 ಕೋಟಿಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆಂತರಿಕ ಸಂಪನ್ಮೂಲಗಳಿಂದ ಭರಿಸಲಾಗುವುದು.
BREAKING: ‘384 KAS ಹುದ್ದೆ’ಗಳ ನೇಮಕಾತಿಯ ‘ಪೂರ್ವಭಾವಿ ಪರೀಕ್ಷೆ’ಗೆ ವೇಳಾಪಟ್ಟಿ ಪ್ರಕಟ | KAS Exam 2024
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ‘ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್’ ಗುಡ್ ನ್ಯೂಸ್