ಬೆಂಗಳೂರು: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಹೆಸರಿನಲ್ಲಿ ವೈದ್ಯರು, ಶುಶ್ರೋಷಕರು, ಲ್ಯಾಬೋರೇಟರಗಳು, ಟೆಕ್ನೀಶಿಯನ್‍ಗಳು, ರೆಸಿಡೆಂಟ್‍ಗಳು ಮತ್ತು ಇತರೆ ಹುದ್ದೆಗಳ ಗುತ್ತಿಗೆ ನೇಮಕಾತಿ ಕುರಿತಂತೆ ಸುಳ್ಳು ಪ್ರಕಟಣೆಯು ವಾಟ್ಸ್‍ಅಫ್‍ನಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನಿಂದ ಯಾವುದೇ ಪ್ರಕಟಣೆ ಹೊರಡಿಸಿರುವುದಿಲ್ಲ. ಪ್ರಕಟಣೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಟ್ರಸ್ಟ್‍ನ ಅಧಿಕೃತ ವೆಬ್‍ಸೈಟ್ http://arogya.karnatka.gov.in/sat/ ನಿಂದ ಪಡೆಯಬಹುದು ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್‍ನ ಕಾರ್ಯಕಾರಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.