ನವದೆಹಲಿ: ದಕ್ಷಿಣ ಆಫ್ರಿಕಾ ಮಣಿಸಿ ಟಿ20 ವಿಶ್ವಕಪ್ ಗೆದ್ದಂತ ಭಾರತದ ಕ್ರಿಕೆಟ್ ತಂಡವನ್ನು ಲೋಕಸಭೆಯಲ್ಲಿ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅಭಿನಂದಿಸಿದರು.
ಇಂದು ಲೋಕಸಭೆ ಆರಂಭವಾಗುತ್ತಿದ್ದಂತೇ, ಸ್ವೀಕರ್ ಓಂ ಬಿರ್ಲಾ ಅವರು, ದೇಶದ ಯುವಕರು ಮತ್ತು ಕ್ರೀಡಾಪಟುಗಳು ಈ ಗೆಲುವಿನಿಂದ ಸ್ಪೂರ್ತಿ ಪಡೆಯುವಂತೆ ಆಗಿದೆ ಎಂದರು.
ಅಂದಹಾಗೇ ಜೂನ್.29ರಂದು ಬಾರ್ಬಡೋಸ್ ನ ಬ್ರಿಜ್ ಟೌನ್ ನಲ್ಲಿ ನಡೆದಂತ ಟಿ20 ವಿಶ್ವಕಪ್ ಫೈನಲ್ ಪಂದ್ಯಾವಳಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತದ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್ ಗಳಿಂದ ಸೋಲಿಸಿತು. ಈ ಮೂಲಕ 17 ವರ್ಷಗಳ ಬಳಿಕ 2ನೇ ಬಾರಿಗೆ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಭಾರತ ಗೆದ್ದ ಕೀರ್ತಿಯನ್ನು ಗಳಿತ್ತು.
ಡಿಸಿಎಂ ಡಿಕೆ ಶಿವಕುಮಾರ್ ‘ಸಿಎಂ’ ಆಗಲೇಬೇಕು, ಆಗೇ ಆಗುತ್ತಾರೆ : ಶಾಸಕ ಬಸವರಾಜ್ ಶಿವಗಂಗಾ ಹೇಳಿಕೆ
ಬೆಂಗಳೂರಲ್ಲಿ ‘HIV’ ಸೊಂಕಿತನ ಮೇಲೆ ‘ಸಲಿಂಗಕಾಮಿ’ಯಿಂದ ಅತ್ಯಾಚಾರ : ಮನೆಯಲ್ಲಿದ್ದ ನಗದು ದೋಚಿ ಪರಾರಿ