ಬೆಂಗಳೂರು: ರಾಜ್ಯದ ಮುಜುರಾಯಿ ಇಲಾಖೆಯಿಂದ ಮತ್ತೊಂದು ಮಹತ್ವದ ಹೆಜ್ಜೆಯನ್ನು ಇರಿಸಲಾಗಿದೆ. ಅದೇ ವಿವಿಧ ಯಾತ್ರೆಗಳಿಗೆ ತೆರಳುವಂತ ಯಾತ್ರಾರ್ಥಿಗಳಿಗೆ ನೀಡುವಂತ ಸಹಾಯಧನ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಣಗೊಳಿಸಲಾಗಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಹೌದು ಕರ್ನಾಟಕ ಸರ್ಕಾರದ , ಮುಜರಾಯಿ ಇಲಾಖೆಯಿಂದ ಕೈಗೊಳ್ಳುವ ಚಾರ್ ಧಾಮ್ ಯಾತ್ರೆ ರೂ. 30,000, ಕೈಲಾಸ ಮಾನಸ ಸರೋವರ ಯಾತ್ರೆ ರೂ20,000 ಮತ್ತು ಕಾಶಿ ಯಾತ್ರೆಯಲ್ಲಿ ಗಯಾ ಸೇರಿಸಿ ರೂ.5,000 ( ಒಟ್ಟು 30000 ಯಾತ್ರಾರ್ಥಿಗಳಿಗೆ) ಹಾಗೂ ರೈಲ್ ಮೂಲಕ ಯಾತ್ರೆ ಕೈಗೊಳುವ ಯಾತ್ರಾರ್ಥಿಗಳಿಗೆ ರೂ.5000 ದಿಂದ ರೂ 7500 ಕ್ಕೆ ಸಹಾಯಧನ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಪಾವತಿಸುವ ಸಹಾಯಧನ ಪಡೆಯಲು
ಹತ್ತು ಹಲವು ನಿಭಂದನೆ ಹಾಗೂ ಕಛೇರಿಗಳಿಗೆ ತಡಕಾಡುವ ವ್ಯವಸ್ಥೆಗೆ ಬ್ರೇಕ್ ಹಾಕಲಾಗಿದೆ.
ಸಹಾಯಧನ ಪಾವತಿಸುವ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ಮೊಬೈಲ್ ಆಪ್ ಮೂಲಕ ನೋಂದಣಿ ಮಾಡಿಕೊಂಡು, ಜಿಯೋಲೊಕೇಶನ್ (Geo Location) ಮಾಹಿತಿಯನ್ನು ಪೂರ್ಣಗೊಳಿಸಿ, ಸೆಲ್ಸಿ ಒಳಗೊಂಡಿರುವ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ಯಾತ್ರಾ ಸ್ಥಳದಲ್ಲಿ ನಿಮ್ಮ ಉಪಸ್ಥಿತಿಯನ್ನು ಖಚಿತಪಡಿಸಿ ಮತ್ತು ಫೋಟೋದ ಹಿನ್ನೆಲೆಯಲ್ಲಿ ದೇವಾಲಯದ ಪ್ರಮುಖ ಸ್ಥಳವನ್ನು ಕಾಣುವಂತೆ ಅಪ್‌ಲೋಡ್ ಮಾಡಬೇಕು. (ದೇವಾಲಯದ 5 ಕಿಲೋ ಮೀಟರ್ ಒಳಗೆ). ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಪ್ರವರ್ಗ ಸಿ ದೇವಾಲಯದ ಅರ್ಚಕರು / ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ ಒಟ್ಟು 2400 ಜನಕ್ಕೆ ವರ್ಷದಲ್ಲಿ ಒಂದು ಬಾರಿ ಉಚಿತ ಕಾಶಿ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳಿಗೆ ಸಹಾಯಧನ ಪಾವತಿಯನ್ನು ಸರಳೀಕರಣ ಗೊಳಿಸಿ ಹೊರಡಿಸಿರುವ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
BIG NEWS: ನಾಳೆ ರಾಜ್ಯಾಧ್ಯಂತ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೆ ಮೀಸಲಿಗೆ ಆಗ್ರಹಿಸಿ ಕರವೇಯಿಂದ ಪ್ರತಿಭಟನೆ
ನನ್ನ ಎದುರಲ್ಲೇ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ : ದಾಸನ ವಿರುದ್ಧವೆ ಹೇಳಿಕೆ ನೀಡಿದ ಪವಿತ್ರಾಗೌಡ!