ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿದೆ. ಹೀಗಾಗಿ ಕಾವೇರಿ ನದಿ ನೀರು ಬಳಕೆದಾರರಿಗೆ ಸಂತಸದ ಸುದ್ದಿ ಎನ್ನುವಂತೆ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಏರಿಕೆ ಕಂಡಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಡ್ಯಾಂಗೆ 12,867 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ನಿನ್ನೆ 18,644 ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣವಾಗಿದೆ.
ಕೊಡಗು ಭಾಗದಲ್ಲಿ ಮಳೆ ಅಲ್ಪ ತಗ್ಗಿದ ಹಿನ್ನಲೆ ನಿನ್ನೆಗಿಂತಲೂ ಇಂದು ಒಳಹರಿವು ಇಳಿಕೆ ಕಂಡಿದೆ. 94.40 ಅಡಿಗೆ ಏರಿಕೆ ಕಂಡ ಡ್ಯಾಂನ ನೀರಿನ ಮಟ್ಟ. 124.80 ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 94.40 ಅಡಿ ನೀರು ಸಂಗ್ರಹವಾಗಿದೆ.
ನಿನ್ನೆ 92.80 ಅಡಿ ನೀರು ಸಂಗ್ರಹವಾಗಿತ್ತು. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ ಸದ್ಯ 18.733 ಟಿಎಂಸಿ ನೀರು ಸಂಗ್ರಹವಿದೆ.
ಇಂದಿನ ಕೆಆರ್‌ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ – 124.80 ಅಡಿ.
ಇಂದಿನ ಮಟ್ಟ – 94.40 ಅಡಿ.
ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
ಇಂದಿನ ಸಾಮರ್ಥ್ಯ – 18.733 ಟಿಎಂಸಿ
ಒಳ ಹರಿವು – 12,867 ಕ್ಯೂಸೆಕ್
ಹೊರ ಹರಿವು – 507 ಕ್ಯೂಸೆಕ್
ನನ್ನ ಎದುರಲ್ಲೇ ರೇಣುಕಾಸ್ವಾಮಿ ಮೇಲೆ ದರ್ಶನ್ ಹಲ್ಲೆ ಮಾಡಿದ : ದಾಸನ ವಿರುದ್ಧವೆ ಹೇಳಿಕೆ ನೀಡಿದ ಪವಿತ್ರಾಗೌಡ!
ಟಿ-20 ವಿಶ್ವಕಪ್ ಗೆದ್ದ ಭಾರತ : ವಿಮಾನದಲ್ಲೇ ಕುಳಿತು ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ | Watch Video